ಕರ್ನಾಟಕದಲ್ಲಿ (Karnataka) ಎರಡೂವರೆ ಲಕ್ಷದಷ್ಟು ಸರ್ಕಾರಿ ಹುದ್ದೆಗಳು (Govt Jobs) ಖಾಲಿ ಇವೆ. ರಾಜ್ಯ ಸರ್ಕಾರದ ಮಾಹಿತಿ ಪ್ರಕಾರ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ ಶೇಕಡಾ 32ರಷ್ಟು ಹುದ್ದೆಗಳು ಖಾಲಿ ಇವೆ.
ಒಟ್ಟು ಮಂಜೂರಾದ 7.56 ಲಕ್ಷ ಸರ್ಕಾರಿ ಹುದ್ದೆಗಳ ಪೈಕಿ 5 ಲಕ್ಷದ 16 ಸಾವಿರ ಹುದ್ದೆಗಳಷ್ಟೇ ಭರ್ತಿ ಇವೆ.
ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ (Primary Education) ಅತೀ ಹೆಚ್ಚು ಅಂದರೆ 58 ಸಾವಿರ ಹುದ್ದೆಗಳು ಖಾಲಿ ಇವೆ.
ಆರೋಗ್ಯ ಇಲಾಖೆಯಲ್ಲಿ (Health Department) 34 ಸಾವಿರ ಹುದ್ದೆಗಳು ಖಾಲಿ ಇವೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ (Rural Development Department) 9 ಸಾವಿರ ಮತ್ತು ಒಳಾಡಳಿತ ಇಲಾಖೆಯಲ್ಲಿ 28 ಸಾವಿರ ಹುದ್ದೆಗಳು ಖಾಲಿ ಇವೆ.
ಕೃಷಿ ಇಲಾಖೆಯಲ್ಲಿ (Agriculture) 6 ಸಾವಿರ ಹುದ್ದೆಗಳು, ಪಶುಸಂಗೋಪನಾ ಇಲಾಖೆಯಲ್ಲಿ 9 ಸಾವಿರ, ಕಂದಾಯ ಇಲಾಖೆಯಲ್ಲಿ 10 ಸಾವಿರ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿ 12 ಸಾವಿರ ಹುದ್ದೆಗಳು ಖಾಲಿ ಇವೆ.
ಒಂದು ವೇಳೆ ಖಾಲಿ ಇರುವ 2.52 ಲಕ್ಷದ ಹುದ್ದೆಗಳನ್ನು ಭರ್ತಿ ಮಾಡಿದರೆ ಆಗ ಸರ್ಕಾರಕ್ಕೆ ವಾರ್ಷಿಕವಾಗಿ 8 ಸಾವಿರದಿಂದ 9 ಸಾವಿರ ಕೋಟಿ ರೂಪಾಯಿವರೆಗೆ ಹೆಚ್ಚುವರಿ ಹೊರೆ ಆಗುತ್ತದೆ.
ADVERTISEMENT
ADVERTISEMENT