33 ಡಿವೈಎಸ್ಪಿಗಳು, 132 ಪೊಲೀಸ್ ಇನ್ಸ್ಪೆಕ್ಟ್ರರ್ಗಳ ವರ್ಗಾವಣೆ ಹಾಗೂ ಹೊಸದಾಗಿ ಸೃಷ್ಟಿಯಾದ ಹುದ್ದೆಗಳಿಗೆ ನೇಮಕಾತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯು.ಡಿ.ಕೃಷ್ಣಕುಮಾರ್-ಡಿವೈಎಸ್ಪಿ ಬಿಡಿಎ, ಟಿ.ಎಂ.ಶಿವಕುಮಾರ್-ಎಸಿಪಿ ಮಡಿವಾಳ ಉಪವಿಭಾಗ, ಹೆಚ್.ಬಿ.ರಮೇಶ್ ಕುಮಾರ್-ಎಸಿಪಿ ವಿ.ವಿ.ಪುರಂ ಉಪವಿಭಾಗ, ಎಂ.ಎನ್.ನಾಗರಾಜ್-ಎಸಿಪಿ ಸಿಸಿಬಿ ಬೆಂಗಳೂರು ಸೇರಿದಂತೆ ಒಟ್ಟು 33 ಡಿವೈಎಸ್ಪಿಗಳನ್ನು ವರ್ಗಾಯಿಸಲಾಗಿದೆ.
ರವಿಕಿರಣ್-ಸಂಪಂಗಿ ರಾಮನಗರ ಠಾಣಾ ಇನ್ಸ್ಪೆಕ್ಟರ್, ಮಂಜುನಾಥ್ ಜಿ.ಹೂಗಾರ್- ಕುಂಬಳಗೋಡು ಠಾಣೆ, ನರೇಂದ್ರ ಬಾಬು-ಕಾಟನ್ಪೇಟೆ ಪೊಲೀಸ್ ಠಾಣೆ, ಕೆ.ಲಕ್ಷ್ಮೀ ನಾರಾಯಣ್-ಸಿಸಿಬಿ ಬೆಂಗಳೂರು ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 132 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಲಾಗಿದೆ.