ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಾರ್ವಜನಿಕ ಉದ್ಯಮ ಇಲಾಖೆ ಕಾರ್ಯದರ್ಶಿ ಡಾ ಶಾಮಲಾ ಇಕ್ಬಾಲ್ ಅವರನ್ನು ಆಹಾರ ಮತ್ತು ಗುಣಮಟ್ಟ ಸುರಕ್ಷತೆ ಪ್ರಾಧಿಕಾರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.
ಕಾವೇರಿ ಬಿ ಬಿ ಅವರನ್ನು ಕರ್ನಾಟಕ ರಾಜ್ಯ ಖನಿಜ ನಿಗಮ ವ್ಯವಸ್ಥಾಪಕ ನಿರ್ದೇಶಕರು ಹುದ್ದೆಯಿಂದ ಸರ್ವಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಹುದ್ದೆಯಿಂದ ಪಲ್ಲವಿ ಆಕೃತಿ ಅವರನ್ನು ವರ್ಗಾಯಿಸಲಾಗಿದೆ.
ವಿನೋದ್ ಪ್ರಿಯ ಆರ್ ಅವರನ್ನು ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಆಹಾರ ಮತ್ತು ಗುಣಮಟ್ಟ ಸುರಕ್ಷತೆ ಪ್ರಾಧಿಕಾರದ ಆಯುಕ್ತ ಹುದ್ದೆಗೆ ಸರ್ಕಾರ ಕಾರ್ಯದರ್ಶಿ ಹುದ್ದೆಯ ಸಮಾನದ ಸ್ಥಾನಮಾನ ಮತ್ತು ಸರ್ವಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರು ಹುದ್ದೆಗೆ ನಗರಾಡಳಿತದ ನಿರ್ದೇಶಕರಿಗೆ ಸಮಾನದ ಸ್ಥಾನಮಾನ ಎಂದು ಪರಿಗಣಿಸಲಾಗಿದೆ.