ಈ ಲೋಕಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಆಘಾತ ಅನುಭವಿಸಲಿರುವ ಪಕ್ಷ ಅದು ಜೆಡಿಎಸ್. ಬಿಜೆಪಿ ಜೊತೆಗೆ ಸೇರಿ ಕಾಂಗ್ರೆಸ್ನ್ನು ಕಟ್ಟಿಹಾಕುವ ಕುಮಾರಸ್ವಾಮಿ ತಂತ್ರಗಾರಿಕೆ ಜೆಡಿಎಸ್ಗೆ ದುಬಾರಿಯಾಗಿ ಪರಿಣಮಿಸಿದೆ.
ಪ್ರಮುಖ ಚುನಾವಣಾ ವಿಶ್ಲೇಷಕ ಗುರುರಾಜ್ ಅಂಜನ್ ಅವರ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್ ಒಂದೂ ಸೀಟು ಗೆಲ್ಲುವ ಸಾಧ್ಯತೆಗಳಿಲ್ಲ.
ಕಳೆದ ವರ್ಷದಿಂದ ಜೆಡಿಎಸ್ನ ಹಂಗಾಮಿ ಅಧ್ಯಕ್ಷರಾಗಿಯೇ ಮುಂದುವರೆದಿರುವ ಮಾಜಿ ಮುಖ್ಯಮಂತ್ರಿಯೇ ಮಂಡ್ಯದಲ್ಲಿ ಸೋತರೂ ಅಚ್ಚರಿಯೇನಿಲ್ಲ ಎಂದು ಗುರುರಾಜನ್ ಅಂಜನ್ ಅವರು ಅಂದಾಜಿಸಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಸನದಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಸೋಲುವುದು ಖಚಿತವಾಗಿದೆ.
ಜೆಡಿಎಸ್ ನಿರೀಕ್ಷೆಯಲ್ಲಿರುವ ಕೋಲಾರ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಬಹುದು ಎಂದು ಗುರುರಾಜ್ ಅಂಜನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಚುನಾವಣಾ ವಿಶ್ಲೇಷಕ ಸಾಯಿಬ್ಪಾಲ್ ಪಂಡಿತ್ ಅವರ ಕರ್ನಾಟಕದಲ್ಲಿ ಜೆಡಿಎಸ್ ಒಂದೇ ಒಂದು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಲ್ಲ.
ಒಂದು ವೇಳೆ ಕುಮಾರಸ್ವಾಮಿ ಮಂಡ್ಯದಲ್ಲಿ ಸೋತರೆ ಅದು ಜೆಡಿಎಸ್ನ ಶವಪೆಟ್ಟಿಗೆ ಕೊನೆ ಮೊಳೆ ಹೊಡೆದಂತಾಗಲಿದೆ.
ADVERTISEMENT
ADVERTISEMENT