ಅವಧಿಗೂ ಮೊದಲೇ ಖಾಲಿಯಾಗಿರುವ ವಿಧಾನಪರಿಷತ್ನ ಮೂರು ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಉಪ ಚುನಾವಣೆ ಘೋಷಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಜಯ ಸಾಧಿಸಿರುವ ಕಾಂಗ್ರೆಸ್ ಪರಿಷತ್ ಉಪ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಗೆಲ್ಲಲಿದೆ.
ವಿಧಾನಸಭಾ ಸದಸ್ಯರು ಅಂದರೆ ಶಾಸಕರು ತಮ್ಮ ಮತದಾನದ ಮೂಲಕ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ವಿಧಾನಸಭೆಯಲ್ಲಿ ಬಲಾಬಲ:
ಮೇ 13ರಂದು ಪ್ರಕಟವಾಗಿರುವ ಫಲಿತಾಂಶದ ಪ್ರಕಾರ ವಿಧಾನಸಭೆಯಲ್ಲಿ ಕಾಂಗ್ರೆಸ್ 135 ಮತ್ತು ಬಿಜೆಪಿ 65 ಮತ್ತು ಜೆಡಿಎಸ್ ಕೇವಲ 19 ಶಾಸಕರನ್ನು ಹೊಂದಿದೆ.
ಸರ್ವೋದಯ ಕರ್ನಾಟಕ ಪ್ರಗತಿ ಪಕ್ಷ -1, ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ -1 ಶಾಸಕರನ್ನು ಹೊಂದಿದೆ.
ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಗೌರಿಬಿದನೂರಿನಿಂದ ಪಕ್ಷೇತರ ಶಾಸಕರಾಗಿ ಕೆ ಹೆಚ್ ಪುಟ್ಟಸ್ವಾಮಿ ಗೌಡ ಆಯ್ಕೆಯಾಗಿದ್ದಾರೆ.
ಪರಿಷತ್ ಚುನಾವಣೆ ಗೆಲ್ಲಲು ಅಗತ್ಯ ಮತ:
224 ಸದಸ್ಯ ಬಲದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಂಎಲ್ಸಿ ಆಗಿ ಆಯ್ಕೆ ಆಗಲು 29 ಶಾಸಕರ ಮತಗಳನ್ನು ಪಡೆಯುವುದು ಅನಿವಾರ್ಯ.
ಈ ಲೆಕ್ಕಾಚಾರದಲ್ಲಿ 135+2 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆಲ್ಲಲಿದೆ.
ಜೆಡಿಎಸ್ಗೆ ಅಭ್ಯರ್ಥಿ ಕಣಕ್ಕಿಳಿಸಲು ಸಾಧ್ಯವಿಲ್ಲ:
ಜೆಡಿಎಸ್ನದ್ದು ದಯನೀಯ ಸ್ಥಿತಿ. ಜೆಡಿಎಸ್ಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಗತ್ಯವಾದ ಕನಿಷ್ಠ 29 ಶಾಸಕರ ಮತಗಳೂ ಇಲ್ಲ.
ಪರಿಷತ್ನಲ್ಲಿ ಹೆಚ್ಚಲಿದೆ ಕಾಂಗ್ರೆಸ್ ಬಲ:
ಸದ್ಯಕ್ಕೆ 75 ಸದಸ್ಯ ಬಲದ ಪರಿಷತ್ನಲ್ಲಿ ಬಿಜೆಪಿ 35, ಕಾಂಗ್ರೆಸ್ 25 ಮತ್ತು ಜೆಡಿಎಸ್ 8 ಸದಸ್ಯರನ್ನು ಹೊಂದಿದೆ. ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದಾರೆ. ಬಿಜೆಪಿಯಿಂದಲೇ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿಯವರು ಸಭಾಪತಿಯಾಗಿದ್ದಾರೆ.
ಉಪ ಚುನಾವಣೆಯ ಬಳಿಕ ಕಾಂಗ್ರೆಸ್ ಬಲಾಬಲ 28ಕ್ಕೆ ಏರಿಕೆ ಆಗಲಿದೆ. ಸದನದಲ್ಲಿ ಬಹುಮತಕ್ಕೆ 38 ಸದಸ್ಯರ ಬೆಂಬಲ ಅಗತ್ಯ.
ADVERTISEMENT
ADVERTISEMENT