`ಸಿಎಂ ಬಸವರಾಜ ಬೊಮ್ಮಾಯಿ ಯಾವುದೋ ಒಂದು ಸಂಘಟನೆಯ ಕೈಗೊಂಬೆ’ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ `ಯಾವುದೋ ಒಂದು ಸಮುದಾಯವನ್ನು ರಕ್ಷಿಸಿ ಸರ್ಕಾರ ನಡೆಸಲು ಸಾಧ್ಯವಿಲ್ಲ’. ಕರ್ನಾಟಕದ ಜನತೆ ಇಂತಹ ಬೆಳವಣಿಗಳನ್ನು ಒಪ್ಪಿಕೊಳ್ಳಲ್ಲ. ಈ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಜನತೆ ಕಸದ ಬುಟ್ಟಿಗೆ ಎಸೆಯಲಿದ್ದಾರೆ’ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
`ನಮ್ಮ ಮುಖ್ಯಮಂತ್ರಿ ಯಾವುದೋ ಒಂದು ಸಂಘಟನೆಯ ಕೈಗೊಂಬೆ. ಅವರ ನಿರ್ದೇಶನದಂತೆ ಅವರು ಸರ್ಕಾರವನ್ನು ನಡೆಸುತ್ತಿದ್ದಾರೆ. ನಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಅವರು (ಸಂಘಟನೆಯವರು) ಏನೆಲ್ಲ ನಿರ್ದೇಶನಗಳನ್ನು ನೀಡುತ್ತಿದ್ದಾರೋ ಆ ನಿರ್ಧಾರಗಳನ್ನು ಸಿಎಂ ತೆಗೆದುಕೊಳ್ಳುತ್ತಿದ್ದಾರೆ.
`ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಈ ಸರ್ಕಾರದ ನಿರ್ಧಾರ ಎಲ್ಲಿದೆ..? ಹಲಾಲಾ ಮಟನ್ ಬಹಿಷ್ಕಾರಕ್ಕೆ ಕರೆ ನೀಡಿದವರ ಮೇಲೆ ಈ ಸರ್ಕಾರದ ಜವಾಬ್ದಾರಿ ಏನು..? ಈ ಬೆಳವಣಿಗೆಗಳ ಬಗ್ಗೆ ಈ ಸರ್ಕಾರ ಯಾವುದೇ ನಿರ್ದಿಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ಇದು ಮುಂದೆ ಎಲ್ಲಿ ಹೋಗಿ ನಿಂತುಕೊಳ್ಳಲಿದೆ.’
`ರಾಜ್ಯದ ಎಲ್ಲ ಜನರನ್ನು ರಕ್ಷಣೆ ಮಾಡುವುದು ಈ ಸರ್ಕಾರದ ಕರ್ತವ್ಯ. ಎಲ್ಲ ಸಮುದಾಯಗಳನ್ನು ಸರ್ಕಾರ ರಕ್ಷಿಸಬೇಕು. ಕೇವಲ ಒಂದು ಸಮುದಾಯವನ್ನು ರಕ್ಷಿಸಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ಚುನಾವಣೆಗಾಗಿಯೇ ಇದೆಲ್ಲ ಮಾಡ್ತಿದ್ದಾರೆ. ಇದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗುತ್ತದೆ. ಕರ್ನಾಟಕದ ಜನತೆ ಇಂತಹ ಬೆಳವಣಿಗಳನ್ನು ಒಪ್ಪಿಕೊಳ್ಳಲ್ಲ. ಈ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಜನತೆಗೆ ಕಸದ ಬುಟ್ಟಿಗೆ ಎಸೆಯಲಿದ್ದಾರೆ’ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.