2025ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಎರಡು ಹೋಳಾಗಿ ಆ ಎರಡು ಗುಂಪಿನಲ್ಲಿ ಒಂದು ಗುಂಪು ಬಿಜೆಪಿ ಮತ್ತು ಜೆಡಿಎಸ್ ಜೊತೆಗೆ ಸೇರಿಕೊಂಡು ಈಗಿರುವ ಕಾಂಗ್ರೆಸ್ ಸರ್ಕಾರ ಬದಲಾಗಲಿದೆ
ಎಂದು ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಈ ಜ್ಯೋತಿಷಿಯ ಟ್ವೀಟ್ನ್ನು ನಂಬಿದ ಕನ್ನಡದ ಮಾಧ್ಯಮಗಳು 2025ಕ್ಕೆ ಕರ್ನಾಟಕದಲ್ಲಿ ಬಿಜೆಪಿ+ಜೆಡಿಎಸ್ ಮತ್ತು ಕಾಂಗ್ರೆಸ್ ಗುಂಪಿನ ಸರ್ಕಾರ ಬರಲಿದೆ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ ಎಂದು ವರದಿ ಮಾಡಿವೆ.
ಕರ್ನಾಟಕದ ರಾಜಕಾರಣದ ಬಗ್ಗೆ ಸುಳ್ಳು ಭವಿಷ್ಯ ಹೇಳಿದ್ದ ಜ್ಯೋತಿಷಿಯ ಟ್ವೀಟ್ ನಿಜವಾಗುತ್ತಾ ಎಂದು ವಿಜಯ ಕರ್ನಾಟಕ, ವಿಸ್ತಾರ ನ್ಯೂಸ್ ಮತ್ತು ಒನ್ಇಂಡಿಯಾ ಕನ್ನಡ ಸುದ್ದಿ ಪ್ರಕಟಿಸಿವೆ.
ADVERTISEMENT
ಆದರೆ ಈ ಮಾಧ್ಯಮಗಳು ಅನಿರುದ್ಧ್ ಕುಮಾರ್ ಮಿಶ್ರಾ ಎಂಬ ಜ್ಯೋತಿಷಿ ಕರ್ನಾಟಕದ ರಾಜಕೀಯದ ಬಗ್ಗೆ ಹೇಳಿದ್ದ ಹಳೆ ಭವಿಷ್ಯವನ್ನು ಕನಿಷ್ಠ ಪಕ್ಷ ಪರಿಶೀಲಿಸಲು ಕೂಡಾ ಪ್ರಯತ್ನಿಸಲಿಲ್ಲ.
ಖ್ಯಾತ ಜ್ಯೋತಿಷಿ ಹೇಳಿದ ಸುಳ್ಳು 1:
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆದ ಬಳಿಕ ಏಪ್ರಿಲ್ 23ರಂದು ಟ್ವೀಟಿಸಿದ್ದ ಈ ಜ್ಯೋತಿಷಿ ಕರ್ನಾಟಕದಲ್ಲಿ ಚುನಾವಣೆಯ ಬಳಿಕ ಬಿಜೆಪಿ ಸರ್ಕಾರ ಮುಂದುವರೆಯಲಿದೆ ಎಂದು ಭವಿಷ್ಯ ನುಡಿದಿದ್ದರು.
ADVERTISEMENT