ADVERTISEMENT
ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಕುಂಭದ್ರೋಣ ಮಳೆ ಆಗುತ್ತಿದೆ. ನದಿಮೂಲಗಳಿಗೆ ಮತ್ತೆ ಜೀವಕಳೆ ಬರುತ್ತಿದೆ.
ಕರಾವಳಿಯ ಜಿಲ್ಲೆಗಳ ಪೈಕಿ ಉಡುಪಿಯ ಪಡುವಾರಿಯಲ್ಲಿ 203.5ಮಿಲಿಮೀಟರ್, ದಕ್ಷಿಣ ಕನ್ನಡದ ಬಲಂಜಿಯಲ್ಲಿ 187 ಮಿಲಿಮೀಟರ್, ಉತ್ತರಕನ್ನಡದ ಮುಂಡಳ್ಳಿಯಲ್ಲಿ 184 ಮಿಲಿಮೀಟರ್ ಮಳೆ ಆಗಿದೆ.
ಉಡುಪಿಯ ಸ್ವರ್ಣಾ ನದಿ ತುಂಬಿ ಹರಿಯುತ್ತಿದೆ. ಹಿಡಿಯಡ್ಕದ ಬಜೆ ಡ್ಯಾಂ ಭರ್ತಿಯಾಗಿದೆ
ಕಾರವಾರದಲ್ಲಿ ಕೆಎಸ್ಆರ್ಟಿಸಿ ಡಿಪೋಗೆ ನೀರು ನುಗ್ಗಿದೆ. ಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮಲೆನಾಡು ಭಾಗದ ಪೈಕಿ ಆಗುಂಬೆಯ ಹೊನ್ನೆತಾಳಿನಲ್ಲಿ 100 ಮಿಲಿಮೀಟರ್, ಮಡಿಕೇರಿಯ ಗಾಳಿಬೀಡಿನಲ್ಲಿ 100 ಮಿಲಿಮೀಟರ್, ಮೂಡಿಗೆರೆಯ ಬಣಕಲ್ನಲ್ಲಿ 80 ಮಿಲಿಮೀಟರ್ ಗರಿಷ್ಠ ಮಳೆ ಆಗಿದೆ.
ಪರಿಣಾಮ ಗಾಜನೂರಿನ ತುಂಗಾ ಜಲಾಶಯ ಬಹುತೇಕ ಭರ್ತಿ ಆಗಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ.
ಕಾವೇರಿ ಜಲಾನಯನ ಪ್ರದೇಶವಾದ ಕೊಡಗಿನಲ್ಲಿ ಧಾರಕಾರ ಮಳೆ ಆಗುತ್ತಿದೆ. ಭಾಗಮಂಡಲ-ತಲಕಾವೇರಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಗಾಳಿ ಮಳೆಗೆ ಮರಗಳು, ಲೈಟ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪರಿಣಾಮ ಕೆಆರ್ಎಸ್ ಒಳಹರಿವು 1241 ಕ್ಯೂಸೆಕ್ಗೆ ಹೆಚ್ಚಾಗಿದೆ. ಹಾರಂಗಿ ಒಳಹರಿವು 1518 ಕ್ಯೂಸೆಕ್ಗೆ ಏರಿದೆ. ಕೇರಳದ ವೈನಾಡಿನಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ಕಬಿನಿ ಒಳಹರಿವು 3431 ಕ್ಯೂಸೆಕ್ಗೆ ಹೆಚ್ಚಾಗಿದೆ.
ADVERTISEMENT