ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿಯೂ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ 2022ರ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 1 ಗಂಟೆಯ ನಂತರ ಆನ್ಲೈನಿನಲ್ಲಿ (ಇಲಾಖೆಯ ಅಧಿಕೃತ ವೆಬ್ಸೈಟ್) ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಎರಡು ವರ್ಷ ಕೋವಿಡ್ ಇತ್ತು. ಹೀಗಾಗಿ, ಪೂರ್ಣ ಪ್ರಮಾಣದ ಪರೀಕ್ಷೆ ನಡೆದಿರಲಿಲ್ಲ. ಮಾರ್ಚ್ 28ರಂದು ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. 3440 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 8,20,900 ಮಕ್ಕಳು ಹೊಸದಾಗಿ ಪರೀಕ್ಷೆ ಬರೆದಿದ್ದರು. 8,53,436 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 23 ಸಾವಿರ ಮಕ್ಕಳು ಗೈರಾಗಿದ್ದರು. ಒಟ್ಟು 7,30,881 ಮಕ್ಕಳು ಪಾಸಾಗಿದ್ದಾರೆ.
ಈ ಬಾರಿ 85.63ರಷ್ಟು ಪಾಸಾಗಿದ್ದಾರೆ. 4,41,099 ಗಂಡು ಮಕ್ಕಳು ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ 3,58,602 ಮಕ್ಕಳು ಪಾಸಾಗಿದ್ದಾರೆ. ಗಂಡು ಮಕ್ಕಳು ಶೇ. 81ರಷ್ಟು ಪಾಸಾಗಿದ್ದಾರೆ. 4,12,339 ಹೆಣ್ಣುಮಕ್ಕಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 3,72, 279 ಮಕ್ಕಳು ಪಾಸಾಗಿದ್ದಾರೆ. ಹೆಣ್ಣುಮಕ್ಕಳು ಶೇ 90ರಷ್ಟು ಪಾಸಾಗಿದ್ದಾರೆ ಎಂದರು.
karresults.nic.in ವೆಬ್ಸೈಟ್ ನಲ್ಲಿ 2022ರ SSLC ಪರೀಕ್ಷೆ ಫಲಿತಾಂಶವನ್ನು ವೀಕ್ಷಿಸಬಹುದು.