ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ಕೆರೂರು ನಗರದಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಹಿಂದೂ ಮತ್ತು ಮುಸ್ಲಿಂನ ಕೆಲ ವ್ಯಕ್ತಿಗಳು ಗಾಯಗೊಂಡಿದ್ದರು.
ಬಾಗಲಕೋಟೆ ಪ್ರವಾಸದಲ್ಲಿರುವ ಬಾದಾಮಿ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಎರಡೂ ಬಣಗಳ ಗಾಯಾಳುಗಳನ್ನು ಭೇಟಿಯಾಗಲು ಆಸ್ಪತ್ರೆಗೆ ಆಗಮಿಸಿದ್ದಾರೆ.
ಸಿದ್ದರಾಮಯ್ಯನವರ ಭೇಟಿಯನ್ನು ಹಿಂದೂ ಸಂಘಟನೆಯ ಗಾಯಾಳುಗಳು ನಿರಾಕರಿಸಿದ್ದಾರೆ. ಸಿದ್ದರಾಮಯ್ಯನವರು ಭೇಟಿಗೆ ಬರುವುದು ಬೇಡ ಎಂದು ಬಾಗಲಕೋಟೆ ಎಸ್ಪಿಗೆ ಗಾಯಾಳುಗಳು ಫೋನ್ ತಿಳಿಸಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರು ಕೊನೆ ಕ್ಷಣದಲ್ಲಿ ಆಸ್ಪತ್ರೆ ಭೇಟಿ ಕ್ಯಾನ್ಸಲ್ ಮಾಡಿದ್ದಾರೆ.
ಜುಲೈ 6 ರಂದು ಕೆರೂರ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ನಡೆದಿತ್ತು. ಚಾಕು ಇರಿತದಿಂದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರ ಗಾಯಗೊಂಡಿದ್ದರು.
ಘರ್ಷಣೆ ಬಳಿಕ ಮನೆಯ ಮೇಲೆ ದಾಳಿ ಹಾಗೂ ಜುಲೈ 8 ರಂದು ದಾಬಾ ಮೇಲೆ ದಾಳಿ ನಡೆದು ಮಾರಣಾಂತಿಕ ಹಲ್ಲೆ ನಡೆದಿತ್ತು. ಇದರಲ್ಲಿ ಐವರು ಮುಸ್ಲಿಂರು ಗಾಯಗೊಂಡಿದ್ದರು.
ಆಶೀರ್ವಾದ ಆಸ್ಪತ್ರೆಯಲ್ಲಿದ್ದ ಮುಸ್ಲಿಂ ಗಾಯಾಳುಗಳನ್ನ ಭೇಟಿ ಮಾಡಿದ್ದ ಸಿದ್ದರಾಮಯ್ಯನವರು ನಾಲ್ವರಿಗೆ ಒತ್ತಾಯವಾಗಿ ಎರಡು ಲಕ್ಷ ರೂ. ಹಣ ನೀಡಿದ್ದರು. ನಿಮ್ಮ ಹಣ ಬೇಡ ನಮಗೆ ಶಾಂತಿ ಬೇಕು ಎಂದು ಮುಸ್ಲಿಂ ಮಹಿಳೆ ಸಿದ್ದರಾಮಯ್ಯನವರಿಗೆ ವಾಪಾಸು ಹಣ ಎಸೆದಿದ್ದಾರೆ.