KGF ಪಾನ್ ಇಂಡಿಯಾ ಲೆವೆಲ್ ನಲ್ಲಿ ಬಿಗ್ಗೆಸ್ಟ್ ಹಿಟ್ ಸಿನೆಮಾ.. ಒಂದೇ ಹಿಟ್ ಮೂಲಕ ನಟ ಯಶ್, ಡೈರೆಕ್ಟರ್ ಪ್ರಶಾಂತ್ ನೀಲ್ ಸ್ಟಾರ್ ಡಮ್ ಸಿಕ್ಕಾಪಟ್ಟೆ ಹೆಚ್ಚಾಯ್ತು. ಒಂದು ರೇಂಜ್ ನಲ್ಲಿ ಇಬ್ಬರು ಫೇಮಸ್ ಆದರು. KGF 2 ಜೊತೆಗೆ ಸಲಾರ್ ಸೇರಿ ಹಲವು ಸಿನೆಮಾಗಳಿಗೆ ಆಕ್ಷನ್ ಕಟ್ ಹೇಳುವ ಭಾಗ್ಯ ಪ್ರತಿಭಾವಂತ, ಯೂನಿಕ್ ಐಡಿಯಾಲಜಿಯ ಪ್ರಶಾಂತ್ ನೀಲ್ ಗೆ ಒದಗಿಬಂತು.
ಪಾಂಡೆಮಿಕ್ ಕಾರಣದಿಂದ ರಿಲೀಸ್ ಮುಂದೂಡಲ್ಪಟ್ಟಿದ್ದ KGF-ಪಾರ್ಟ್ 2 ಸಿನಿಮಾ ಏಪ್ರಿಲ್ 14ರಂದು ತೆರೆ ಕಾಣಲು ಸಜ್ಜಾಗಿದೆ. ಸಿನೆಮಾ ಮೇಲೆ ಭಾರಿ ನಿರೀಕ್ಷೆಯನ್ನೇ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.

ಈಗಾಗಲೇ ರಿಲೀಸ್ ಆಗಿರುವ ಪ್ರಮೋಷನಲ್ ಟೀಸರ್ ಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. ಸಿನೆಮಾ ಸೆಟ್ ನಲ್ಲಿ ಕ್ರಿಯೇಟ್ ಆಗಿದ್ದ ಬುಜ್ ಈಗಲೂ ಇದೆ.
ಆದರೆ, ಸಿನೆಮಾ ರಿಲೀಸ್ ಸನಿಹದಲ್ಲಿ ಅಭಿಮಾನಿಗಳು ಭಾವಿಸಿದ ರೀತಿಯಲ್ಲಿ ಪ್ರಮೋಷನಲ್ ಆಕ್ಟಿವಿಟಿಯನ್ನು ಚಿತ್ರತಂಡ ನಡೆಸುತ್ತಿಲ್ಲ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ನೆಗ್ಲೆಕ್ಟ್ ಯಾಕೆ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದಾರೆ ಎನ್ನಲಾದ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. ಈ ಸಂಚಾಲನಾತ್ಮಕ ಹೇಳಿಕೆ ಫ್ಯಾನ್ಸ್ ಆಕ್ರೋಶಕ್ಕೂ ಕಾರಣವಾಗಿದೆ. ಅಷ್ಟಕ್ಕೂ ಸ್ಟಾರ್ ನಿರ್ದೇಶಕ ನೀಡಿದ ಹೇಳಿಕೆ ಏನು ಎಂದರೇ?
“ಯಶ್ ದೊಡ್ಡ ಸ್ಟಾರ್.. ಟ್ರೈಲರ್ ಜೊತೆಗೆ ಒಂದು ವಿಶುಯಲ್ ಕೂಡಾ ಮೊದಲೇ ತೋರಿಸುವ ಅಗತ್ಯ ಇಲ್ಲ.. ಕೆಲವೇ ದಿನಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ.. ನೇರವಾಗಿ KGF 2 ಚಿತ್ರವನ್ನು ಏಪ್ರಿಲ್ 14ರಂದು ಥೀಯೇಟರ್ ಗಳಲ್ಲಿ ರಿಲೀಸ್ ಮಾಡುತ್ತೇವೆ” ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಇದನ್ನು ಕೇಳಿ ಇದೇನು ಕಾನ್ಫಿಡೆನ್ಸಾ ಅಥವಾ ಓವರ್ ಕಾನ್ಫಿಡೆನ್ಸಾ ಎಂಬಾ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ತಮ್ಮ ಸಿನೆಮಾ ಮೇಲೆ ನಂಬಿಕೆ ಇರಿಸುವುದು ಒಳ್ಳೆಯದೇ.. ಆದರೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಡುತ್ತಿದ್ದಾರೆ.
ಯಶ್ ನೋಡಿದರೇ ಸಿಕ್ಕಾಪಟ್ಟೆ ಡೌನ್ ಟು ಅರ್ಥ್.. ಅಭಿಮಾನಿಗಳ ಜೊತೆ ವಿನಯದಿಂದ ನಡೆದುಕೊಳ್ಳುತ್ತಾರೆ. ಆದರೆ, ಪ್ರಶಾಂತ್ ನೀಲ್ ನಡೆ ನುಡಿ ಇದಕ್ಕೆ ಭಿನ್ನ ಎಂಬ ಟಾಕ್ ಕೂಡಾ ಕೇಳಿ ಬರುತ್ತಿದೆ.