ಈಗ ಏನಿದ್ದರೂ ಕೆಜಿಎಫ್ನ್ನದ್ದೇ ಹವಾ. ಎಲ್ಲ ಕಡೆಯೂ ಸಲಾಂ ರಾಕಿಭಾಯ್ ಅನ್ನೋ ಘೋಷಣೆ, ಜೈಕಾರ. ರಾಕಿಂಗ್ ಸ್ಟಾರ್ ಯಶ್ ಹೋದ ಕಡೆಯೆಲ್ಲ ಅಭಿಮಾನಿಗಳ ಸಾಗರ, ಅಭಿಮಾನಿಗಳ ಮುತ್ತಿಗೆ. ಈ ನಡುವೆ ದಕ್ಷಿಣ ಭಾರತದಲ್ಲಿ ಎಂದೂ ಕಂಡು ಕೇಳಯರಿಯದ ಅತೀ ದೊಡ್ಡ ಸ್ಟಾರ್ ವಾರ್ಗೆ ವೇದಿಕೆ ಸಜ್ಜಾಗಿದೆ. ಆ ಇಬ್ಬರು ಸ್ಟಾರ್ಗಳು ಬೇರೆ ಯಾರೂ ಅಲ್ಲ, ಅದು ನಮ್ಮ ರಾಕಿಂಗ್ ಸ್ಟಾರ್ ಯಶ್ ಮತ್ತು ದಳಪತಿ ವಿಜಯ್.
ತಮಿಳುನಾಡಿನಲ್ಲಿ ಒಂದೇ ವಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಮತ್ತು ದಳಪತಿ ಅಭಿನಯದ ಬೀಸ್ಟ್ ಸಿನಿಮಾ ರಿಲೀಸ್ ಆಗ್ತಿದೆ. ಏಪ್ರಿಲ್ 13ರಂದು ಅಂದ್ರೆ ಬುಧವಾರ ವಿಜಯ್ ಅವರ ಬೀಸ್ಟ್ ಸಿನಿಮಾ ರಿಲೀಸ್ ಆಗ್ತಿದೆ. ಬೀಸ್ಟ್ ರಿಲೀಸ್ ಆದ ಮರು ದಿನವೇ ತಮಿಳುನಾಡಿನಲ್ಲಿ ರಾಕಿಂಗ್ಗೆ ಕೆಜಿಎಫ್ ಚಾಪ್ಟರ್-2 ಸಿನಿಮಾ ರೆಡಿ ಆಗಿದೆ. ಅಂದರೆ ದಳಪತಿ ಅಡ್ಡಾದಲ್ಲಿ ವಿಜಯ್ಗೆ ಟಕ್ಕರ್ ಕೊಡಲು ರೆಡಿ ಆಗಿದ್ದಾರೆ ನಮ್ಮ ಯಶ್.
ಎಷ್ಟು ಥಿಯೇಟರ್ಗಳಲ್ಲಿ ಬೀಸ್ಟ್ ರಿಲೀಸ್ ಆಗ್ತಿದೆ, ಎಷ್ಟು ಥಿಯೇಟರ್ಳಲ್ಲಿ ತಮಿಳುನಾಡಲ್ಲಿ ಕೆಜಿಎಫ್ ರಿಲೀಸ್ ಆಗ್ತಿದೆ ಅನ್ನೋದು ಕುತೂಹಲ. ತಮಿಳುನಾಡು ಸಿನಿಮಾ ವಿತರಕರ ಪ್ರಕಾರ ಬರೋಬ್ಬರೀ 800 ಥಿಯೇಟರ್ಗಳಲ್ಲಿ ಬೀಸ್ಟ್ ಲಗ್ಗೆ ಇಡಲಿದೆ. ಅದರ ಕಾಲು ಭಾಗ ಅಂದ್ರೆ 250 ಥಿಯೇಟರ್ಗಳಲ್ಲಿ ಕೆಜಿಎಫ್ ರಿಲೀಸ್ ಆಗ್ತಿದೆ.
ಕೆಜಿಎಫ್ಗೂ ಮೊದಲೇ ಅಂದರೆ ಹಿಂದಿನ ದಿನವೇ ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ಅಭಿನಯದ ಬೀಸ್ಟ್ ರಿಲೀಸ್ ಆಗ್ತಿರೋದ್ರಿಂದ ಸಿನಿಮಾದ ಬೀಸ್ಟ್ ಓಪನಿಂಗ್ ಹೇಗಿರುತ್ತೆ ಅನ್ನೋದು ಕೆಜಿಎಫ್ ಎದುರು ಅದು ಹೇಗೆ ಓಡುತ್ತೆ ಅನ್ನೋದನ್ನು ನಿರ್ಧಾರ ಮಾಡುತ್ತೆ. ಒಂದು ವೇಳೆ ಬೀಸ್ಟ್ ಓಪನಿಂಗ್ಸ್ ಚೆನ್ನಾಗಿದ್ರೆ ಆಗ ಕೆಜಿಎಫ್ ಅಭಿಮಾನಿಗಳನ್ನು ಸೆಳೆದುಬಿಡಬಹುದು ಅನ್ನೋದು ಬೀಸ್ಟ್ ಸಿನಿಮಾ ತಂಡದ ಲೆಕ್ಕಾಚಾರ. ಅಂದಹಾಗೆ ಬೀಸ್ಟ್ ಸಿನಿಮಾ ನಿರ್ಮಾಣ ಮಾಡ್ತಿರುವ ಸನ್ ಟಿವಿ ನೆಟ್ವರ್ಕ್ಗಳ ಮಾಲೀಕ ಕಲಾನಿಧಿ ಮಾರನ್..!