ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪಾನ್ ಇಂಡಿಯಾ ಮೂವೀ KGF ಚಾಪ್ಟರ್ 2 ವರ್ಲ್ಡ್ ವೈಡ್ ರಿಲೀಸ್ ಆಗಿದ್ದು ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಈ ಹಿಂದೆ ಕನ್ನಡದ ಯಾವುದೇ ಚಿತ್ರಕ್ಕೂ ಸಿಗದ ಓಪನಿಂಗ್ KGF ಚಾಪ್ಟರ್ 2ಗೆ ಸಿಕ್ಕಿದೆ.
10000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆ ಕಂಡಿದೆ. ಬೆಂಗಳೂರಿನ ಊರ್ವಶಿ, ಗೌಡನಪಾಳ್ಯದ ಶ್ರೀನಿವಾಸ ಸೇರಿ ಹಲವು ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ 1ಗಂಟೆಗೆ KGF2 ಶೋ ಇತ್ತು. ಯಶ್ ಅಭಿಮಾನಿಗಳು ಅತ್ಯುತ್ಸಾಹದಿಂದ ಸಿನಿಮಾ ಕಣ್ ತುಂಬಿಕೊಂಡರು.
ರಾಕಿಂಗ್ ಸ್ಟಾರ್ ರಗಡ್ ನಟನೆ, ಪ್ರಶಾಂತ್ ನೀಲ್ ಮೇಕಿಂಗ್, ರವಿ ಬಸ್ರುರ್ ಸಂಗೀತಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮಾಗಡಿ ರಸ್ತೆಯ ಪ್ರಸನ್ನ ಸೇರಿ ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಬೆಳಗ್ಗೆ ಆರು ಗಂಟೆಯಿಂದ ಶೋ ಆರಂಭ ಆಗಿದೆ.