ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ KGF chapter 2 ಚಿತ್ರ ಹೊಸ ದಾಖಲೆ ಬರೆದಿದೆ. ಹೆಚ್ಚು ಕಡಿಮೆ RRR ಮಾದರಿ ದಾಖಲೆ ಬರೆಯಲು ಮುಂದಾಗಿದೆ. 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ KGF -2 ರಾರಾಜಿಸಿದೆ.. ಅಭಿಮಾನಿಗಳು full ಫಿದಾ ಆಗಿದ್ದಾರೆ.
ಈಗಾಗಲೇ ಬುಕ್ ಮೈ ಶೋ, ಪೆಟಿಎಂ ನಂತಹ ಟಿಕೆಟ್ ಬುಕಿಂಗ್ ಫ್ಲಾಟ್ ಫಾರಂ ಗಳಲ್ಲಿ 40ಲಕ್ಷಕ್ಕೂ ಅಧಿಕ ಟಿಕೆಟ್ ಮಾರಾಟ ಆಗಿವೆ ಎಂದು ಹೊಂಬಾಳೆ ಫಿಲಂಸ್ ಅಧಿಕೃತವಾಗಿ ಪ್ರಕಟಿಸಿದೆ. ಈ ಅಂಕಿಗಳೇ KGF 2 ಚಿತ್ರದ ಬಗ್ಗೆ ಕ್ರೇಜ್ ಎಷ್ಟಿದೆ ಎಂದು ಹೇಳುತ್ತದೆ.
ಇದನ್ನೂ ನೋಡುತ್ತಿದ್ದರೆ KGF ಚಾಪ್ಟರ್ 2 ಸಿನಿಮಾ ಮೊದಲ ದಿನವೇ RRR ಗಳಿಕೆಯನ್ನು ತುಫಾನ್ ರೀತಿಯಲ್ಲಿ ಮೀರಿಸಲಿದೆ ಎಂಬ ಮಾತು ಬಾಕ್ಸ್ ಆಫೀಸ್ ಪರಿಣಿತರು ಹೇಳುತ್ತಿದ್ದಾರೆ.