ಒಮ್ಮೆ ಕಮಿಟ್ ಆದರೇ, ನನ್ನ ಮಾತನ್ನು ನಾನೇ ಕೇಳಲ್ಲ.. ಟಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರೋ ಈ ಡೈಲಾಗ್ ಕೆಜಿಎಫ್-ಚಾಪ್ಟರ್ 2ಗೆ ಸರಿಯಾಗಿಯೇ ಹೊಂದುತ್ತದೆ. ಬಾಕ್ಸಾಫೀಸ್ ಮೇಲೆ ದಂಡಯಾತ್ರೆ ನಡೆಸಿರುವ ಕೆಜಿಎಫ್2 ಸಿನಿಮಾ ಕಲೆಕ್ಷನ್ನ ಸುನಾಮಿಯನ್ನೇ ಎಬ್ಬಿಸಿದೆ. ಸದ್ಯಕ್ಕೆ ಈ ಸುನಾಮಿ ನಿಲ್ಲುವ ಹಾಗೆಯೂ ಕಾಣುತ್ತಿಲ್ಲ. ಸೌತ್ನಿಂದ ನಾರ್ತ್ವರೆಗೂ ಪ್ರಶಂಸೆಯ ಮಳೆಯೇ ಆಗುತ್ತಿದೆ. ಮೊದಲ ಎರಡು ದಿನದಲ್ಲಿ ಈಸಿಯಾಗಿ 250 ಕೋಟಿ ಕ್ಲಬ್ ಸೇರಿದ್ದ ಯಶ್ ಸಿನಿಮಾ, ಮೂರನೇ ದಿನ 400 ಕೋಟಿ ಕ್ಲಬ್ ಸೇರಿದೆ.
ಡೇ 1 – 165.37 ಕೋಟಿ
ಡೇ 2 – 139.25ಕೋಟಿ
ಡೇ 3 – 115.08 ಕೋಟಿ
ಒಟ್ಟು – 419.70 ಕೋಟಿ
ಸತತ ಮೂರು ದಿನವೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಸೆಂಚುರಿ ಹೊಡೆದಿದೆ. ಭಾನುವಾರದ ಕಲೆಕ್ಷನ್ ಪರಿಗಣಿಸಿದರೇ ರಾಕಿಂಗ್ ಸ್ಟಾರ್ ಮೂವಿ 500 ಕೋಟಿ ಕ್ಲಬ್ ಸೇರಲಿದೆ.
ಬಾಲಿವುಡ್ನಲ್ಲಿ ಕೆಜಿಎಫ್-2 ಹವಾ ಮುಂದುವರೆದಿದೆ. ಮೊದಲ ಮೂರು ದಿನದಲ್ಲಿ ಬರೋಬ್ಬರಿ 143 ಕೋಟಿ ಲೂಟಿ ಮಾಡಿದೆ.
ಗುರುವಾರ -53.95ಕೋಟಿ, ಶುಕ್ರವಾರ 46.79ಕೋಟಿ, ಶನಿವಾರ 42.90 ಕೋಟಿ ಗಳಿಸಿದೆ.
ಟಾಲಿವುಡ್ನಲ್ಲಿ ನರಾಚಿ ದೊರೆಯ ಅಬ್ಬರ ಕಡಿಮೆ ಏನು ಇಲ್ಲ. ಮೂರು ದಿನದಲ್ಲಿ 42 ಕೋಟಿ ಗಳಿಸಿದೆ. ಮೊದಲ ದಿನ 19 ಕೋಟಿ, 2ನೇ ದಿನ 13 ಕೋಟಿ, ಮೂರನೇ ದಿನ 10 ಕೋಟಿ ಕಲೆಕ್ಷನ್ ಮಾಡಿದೆ.
ಅಮೇರಿಕಾದಲ್ಲಿ KGF -2 ಗಳಿಕೆ ದಂಗು ಬಡಿಸುತ್ತಿದೆ. ಭಾನುವಾರ ರಾತ್ರಿ 8.30ಕ್ಕೆ ಲಭ್ಯವಾದ ಬಾಕ್ಸ್ ಆಫೀಸ್ ಮಾಹಿತಿ ಪ್ರಕಾರ, 51ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ.
- KGFChapter2 – $ 685,090
- #Beast – $63,901
24 ದಿನಗಳ ಹಿಂದೆ ರಿಲೀಸ್ ಆದ ಆರ್ಆರ್ಆರ್ ಸಿನಿಮಾ ಈಗಲೂ ಕೆಜಿಎಫ್ಗೆ ಬಿಗ್ ಫೈಟ್ ನೀಡುತ್ತಿದೆ.
ಆರ್ಆರ್ಆರ್ ಹಿಂದಿ ವರ್ಷನ್ ಗಳಿಕೆ 250 ಕೋಟಿ ದಾಟಿದೆ. ಭಾರತದಲ್ಲಿ ಈ ಶುಕ್ರವಾರ ಮತ್ತು ಶನಿವಾರ ಕ್ರಮವಾಗಿ 3 ಕೋಟಿ, 3.30 ಕೋಟಿ ಗಳಿಸಿದೆ. ಓವರ್ಸೀಸ್ ಕಲೆಕ್ಷನ್ 14 ಮಿಲಿಯನ್ ಡಾಲರ್ ದಾಟಿದೆ.