ಭಾರತ ತಂಡದ ಬೌಲರ್ ಹರ್ಷದೀಪ್ ಸಿಂಗ್ ಅವರಿಗೆ ವಿಕಿಪೀಡಿಯಾದಲ್ಲಿ ಖಲಿಸ್ತಾನಿ (Kalistan) ಎಂದು ತೋರಿಸಲಾಗಿದೆ. ಈ ಬಗ್ಗೆ ಭಾರತದ ಐಟಿ ಸಚಿವಾಲಯವು ಭಾರತದಲ್ಲಿನ ವಿಕಿಪೀಡಿಯಾದ ಕಾರ್ಯನಿರ್ವಾಹಕ ಅಧಿಕಾರಿಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಏಷ್ಯಾಕಪ್ನಲ್ಲಿ ಭಾರತ ತಂಡ ಸೂಪರ್ 4 ರ ಹಂತದಲ್ಲಿ ಪಾಕಿಸ್ತಾನದ ವಿರುದ್ಧ ವೀರೋಚಿತ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಬೌಲರ್ ಹರ್ಷದೀಪ್ ಸಿಂಗ್ ಪ್ರಮುಖ ಪಾಕಿಸ್ತಾನದ ಬ್ಯಾಟ್ಸ್ಮನ್ ಕ್ಯಾಚ್ ಕೈಚೆಲ್ಲಿದ್ದರು. ಇದು ಪಾಕಿಸ್ತಾನ ಗೆಲುವಿಗೆ ದೊಡ್ಡ ತಿರುವಾಗಿ ಪರಿಣಮಿಸಿತ್ತು. ಈ ಬೆನ್ನಲ್ಲೇ, ವಿಕಿಪೀಡಿಯಾದಲ್ಲಿ ಹರ್ಷದೀಪ್ ಸಿಂಗ್ ಅವರ ದೇಶದ ಸ್ಥಾನದಲ್ಲಿ ಭಾರತ ತೆಗೆದು ಖಾಲಿಸ್ತಾನ ಎಂದು ತೋರಿಸಲಾಗಿತ್ತು.
ಇಂದು ಈ ಬಗ್ಗೆ ಐಟಿ ಸಚಿವಾಲಯದ ಕಾರ್ಯದರ್ಶಿ, ಭಾರತದ ವಿಕಿಪೀಡಿಯಾ ಕಾರ್ಯನಿರ್ವಾಹಕರನ್ನು ಖುದ್ದಾಗಿ ಬಂದು ವಿವರಣೆ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಇದನ್ನೂ ಓದಿ : Asia Cup 2022 : ಮಧ್ಯಂತರ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ
ಪಂಜಾಬ್ನಲ್ಲಿ ಖಲಿಸ್ತಾನಿಗಳ ಒಂದು ಗುಂಪು ಪ್ರತ್ಯೇಕ ದೇಶಕ್ಕಾಗಿ ಹೋರಾಟ ನಡೆಸುತ್ತಿದೆ. ಈ ಸಂಘಟನೆಯನ್ನು ಭಾರತ ಸರ್ಕಾರ ನಿಷೇಧ ಮಾಡಿದೆ.
ಇನ್ನು ಅನ್ಸುಲ್ ಸಕ್ಸೇನಾ ಎನ್ನುವ ಭಾರತೀಯ ಹ್ಯಾಕರ್, ಹರ್ಷದೀಪ್ ಅವರನ್ನು ಖಲಿಸ್ತಾನಿ (Kalistan) ಎನ್ನುವಂತೆ ಬಿಂಬಿಸಲು ವಿಕಿಪೀಡಿಯಾದಲ್ಲಿ ಎಡಿಟ್ ಮಾಡಿದ್ದ ವ್ಯಕ್ತಿ ಪಾಕಿಸ್ತಾನದವ ಎಂದಿದ್ದಾರೆ. ಅಲ್ಲದೇ, ಆ ವ್ಯಕ್ತಿ ಬಳಿಸಿದ ಮೊಬೈಲ್/ಕಂಪ್ಯೂಟರ್ನ ಐಪಿ ವಿಳಾಸವನ್ನೂ ಹಂಚಿಕೊಂಡಿದ್ದಾರೆ. ಹರ್ಷದೀಪ್ ಬಗೆಗಿನ ತಿದ್ದುಪಡಿಯನ್ನು ಪಾಕಿಸ್ತಾನದ ಪಂಜಾಬ್ ರಾಜ್ಯದ ಮುರ್ರಿ ಎನ್ನುವ ನಗರದಲ್ಲಿ ಮಾಡಲಾಗಿದೆ ಎನ್ನುವುದನ್ನು ತಿಳಿಸಿದ್ದಾರೆ.
Wikipedia page of Indian Player Arshdeep Singh has been edited & deliberately Khalistan is added.
Who is behind this editing & targeting Arshdeep Singh?
Someone from Pakistan.
Here are the IP details of editor. pic.twitter.com/CErervW3Q2
— Anshul Saxena (@AskAnshul) September 4, 2022
ಇದನ್ನೂ ಓದಿ : ಭಾರತೀಯ ಆಹಾರ ನಿಗಮದಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ -113 ಹುದ್ದೆಗಳು ಖಾಲಿ