ಕಿಚ್ಚ ಸುದೀಪ್ (Kiccha Sudeep) ನಟನೆಯ ವಿಕ್ರಾಂತ್ ರೋಣ (Vikranth Rona) ಚಿತ್ರ ವಿಶ್ವಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಲು ಸಿದ್ಧತೆ ನಡೆಸಿದೆ. ಇದೀಗ, ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್ ಹೊರಬಿದ್ದಿದೆ. ವಿಶ್ವಾದ್ಯಂತ ಬರೋಬ್ಬರಿ 3500 ಸ್ಕ್ರೀನ್ಗಳಲ್ಲಿ ವಿಕ್ರಾಂತ್ ರೊಣ ಮಿಂಚಲಿದ್ದಾನೆ ಎಂದು ಚಿತ್ರತಂಡ ಹೇಳಿದೆ.
ವಿಕ್ರಾಂತ್ ರೋಣ (Vikranth Rona) ಚಿತ್ರ ಭಾರತ, ಪಾಕಿಸ್ತಾನ ಸೇರಿದಂತೆ 27 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, 3500 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಸಿನಿಮಾ ನೋಡಬಹುದು ಎಂದಿದ್ದಾರೆ ನಿರ್ಮಾಪಕ ಜಾಕ್ ಮಂಜು. ಈಗಾಗಲೇ ಬಹುತೇಕ ಕಡೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.
ವಿಕ್ರಾಂತ್ ರೋಣ (Vikranth Rona) ಸಿನಿಮಾ ವಿಶ್ವದಾದ್ಯಂತ 3500ಕ್ಕೂ ಹೆಚ್ಚು ಸ್ಕ್ರಿನ್ ಗಳಲ್ಲಿ ಬಿಡುಗಡೆ ಆಗುತ್ತಿದ್ದು, ಕರ್ನಾಟಕದಲ್ಲಿ 425ಕ್ಕೂ ಅಧಿಕ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ. ಬಾಲಿವುಡ್ ನಲ್ಲಿ 900 ಥಿಯೇಟರ್ಸ್, ಟಾಲಿವುಡ್ ನಲ್ಲಿ 350ಕ್ಕೂ ಹೆಚ್ಚು ಥಿಯೇಟರ್ಸ್ ವಿದೇಶಗಳಲ್ಲಿ 800 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಚಿತ್ರದ ನಿರ್ಮಾಪಕ ಜಾಕ್ ಮಂಜು ಹೇಳಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಮತ್ತು ಹಾಡುಗಳು ಸಖತ್ ವೈರಲ್ ಆಗಿವೆ. ರಾ ರಾ ರಕ್ಕಮ್ಮ ಹಾಡು 5 ಭಾಷೆಗಳಲ್ಲಿ ಹವಾ ಸೃಷ್ಠಿಸಿದೆ. ಜುಲೈ 28ರಂದು 2 ಡಿ ಮತ್ತು 3 ಡಿಯಲ್ಲಿ ವಿಕ್ರಾಂತ್ ರೋಣ ತೆರೆಗೆ ಬರುತ್ತಿದೆ. ಮತ್ತೊಂದು ಕುತೂಹಲದ ಸಂಗತಿ ಅಂದರೆ, ಪಾಕಿಸ್ತಾನದಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ ಚಿತ್ರತಂಡ.