ನಟ ಕಿಚ್ಚ ಸುದೀಪ್ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಪ್ರತಿವಾದಿಗಳಿಗೆ ಬೆಂಗಳೂರಿನ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಮಾನನಷ್ಟ ಪ್ರಕರಣದಲ್ಲಿ ಆರೋಪಿಗಳಾಗಿರುವ ನಿರ್ಮಾಪಕ ಎಂ.ಎನ್.ಕುಮಾರ್ ಮತ್ತು ಸುರೇಶ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ ಅವರು ಸಮನ್ಸ್ ಜಾರಿಗೊಳಿಸಿದ್ದು, ಆಗಸ್ಟ್ 26ರಂದು ಹಾಜರಾಗುವಂತೆ ಆರೋಪಿತರಿಗೆ ಸೂಚಿಸಿದ್ದಾರೆ.
7-8 ವರ್ಷಗಳ ಹಿಂದೆ ನನ್ನಿಂದ ಮುಂಗಡ ಹಣ ಪಡೆದಿದ್ದ ಕಿಚ್ಚ ಸುದೀಪ್ ಅವರು ನನಗೆ ಸಿನಿಮಾಗಾಗಿ ಕಾಲ್ಶೀಟ್ ಕೊಟ್ಟಿಲ್ಲ, ನನ್ನ ಹಣವನ್ನೂ ವಾಪಸ್ ಕೊಟ್ಟಿಲ್ಲ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಅವರು ಬಹಿರಂಗವಾಗಿ ಆರೋಪಿಸಿದ್ದರು.
ನಿರ್ಮಾಪಕ ಕುಮಾರ್ ಅವರ ಆರೋಪದಿಂದ ನನ್ನ ಮಾನಹಾನಿಯಾಗಿದೆ ಎಂದು ಆರೋಪಿಸಿ ಕಿಚ್ಚ ಸುದೀಪ್ ಅವರು ದಾವೆ ಹೂಡಿದ್ದರು.
ADVERTISEMENT
ADVERTISEMENT