ವೆಸ್ಟ್ ಇಂಡೀಸ್ ಏಕದಿನ ಕ್ರಿಕೇಟ್ ತಂಡದ ನಾಯಕ ಕಿರನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೇಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇವರು ಆಡುತ್ತಿದ್ದಾರೆ. ನಿವೃತ್ತಿ ನಂತರ ಟಿ-20 ಪ್ರಾಂಚೈಸಿ ಮತ್ತು ಟಿ-10 ಲೀಗ್ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರೆಸುವರು.
ಪೊಲಾರ್ಡ್ 2017 ನಲ್ಲಿ ಏಕದಿನ ಕ್ರಿಕೇಟ್ಗೆ ಪಾದಾರ್ಪಣೆ ಮಾಡಿದ್ದಾರೆ. 10 ವರ್ಷದ ಬಾಲಕನಿದ್ದಾಗಿನಿಂದಲೂ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುವ ಕನಸಿತ್ತು. ಸುಮಾರು 15 ವರ್ಷ ತಂಡದಲ್ಲಿ ಆಡುವ ಅವಕಾಶ ಪಡೆದೆ ವಿಂಡೀಸ್ ಬಳಗದ ನಾಯಕತ್ವ ವಹಿಸಿದೆ. ಇದೀಗ ನಿರ್ಣಯದ ಸಮಯ ಬಂದಿದೆ. ನಿವೃತ್ತಿಯಾಗುವ ನಿರ್ಧಾರ ಮಾಡಿದ್ದೇನೆ ಎಂದು ಪೊಲಾರ್ಡ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಟಿ-20 ಪಂದ್ಯವೊಂದರಲ್ಲಿ ಪೊಲಾರ್ಡ್ ಅವರು ಶ್ರೀಲಂಕಾದ ಅಕಿಲ ಧನಂಜಯ ಬೌಲಿಂಗ್ನಲ್ಲಿ 6 ಎಸೆತಗಳಲ್ಲಿ ಸಿಕ್ಸರ್ ಎಸೆದಿದ್ದರು. ದ.ಆಫ್ರಿಕಾದ ಗಿಪ್ಸ್, ಭಾರತದ ಯುವರಾಜ್ ಸಿಂಗ್ ಅವರ ನಂತರ ಈ ಸಾಧನೆ ಮಾಡಿದ್ದಾರೆ.
ಮುಂದಿನ ವರ್ಷ ಕಿರನ್ ಪೊಲಾರ್ಡ್ 35 ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಇವರು 123 ಏಕದಿನ ಹಾಗೂ 101 ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.