ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗೂ ಲಕ್ನೋ ಸೂಪರ್ ಜೇಂಟ್ಸ್(LSG) ನಡುವೆ ಮುಂಬೈನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ಗೆ ಅನಿರ್ಧಿಷ್ಟ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ಹಾಕಲಾಗಿದೆ.
ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ ಅವರು ಐಪಿಎಲ್ ನೀತಿಸಂಹಿತೆಯ ಲೆವೆಲ್ 1 ಹಂತದ ಅಪರಾಧ ಎಸಗಿದ್ದಾರೆ. ಇದನ್ನು ರಾಹುಲ್ ಅವರೂ ಒಪ್ಪಿಕೊಂಡಿದ್ದಾರೆ ಎಂದು ಐಪಿಎಲ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಹೇಳಲಾಗಿದೆ.
ರಾಹುಲ್ ಟೀಂನ ಮಾರ್ಕಸ್ ಸ್ಟೋನಿಸ್ ಅವರೂ ಸಹಿತ ನೀತಿಸಂಹಿತೆ ಉಲ್ಲಂಘನೆಯ ಲೆವಲ್ 1 ಹಂತದ ಅಪರಾಧ ಎಸಗಿದ್ದಾರೆ. ಸ್ಟೋನಿಸ್ ಅವರಿಗೂ ವಾಗ್ದಂಡನೆ ವಿಧಿಸಲಾಗಿದೆ.
ಸ್ಟೋನಿಸ್ ಅವರೂ ಸಹಿತ ಅನಿರ್ಧಿಷ್ಟ ಅಪರಾಧ ಎಸಗಿದ್ದಾರೆ. ಆದರೆ, ಇವರು ಆರ್ಸಿಬಿ ತಂಡದ ಹರ್ಷಲ್ ಪಟೇಲ್ ಬೌಲಿಂಗ್ ವೇಳೆ ಆನ್ಫೀಲ್ಡ್ ಅಂಪೈರ್ ಜೊತೆಗೆ ವಾಗ್ವಾದ ನಡೆಸಿದ್ದರು.
ಮಂಗಳವಾರ ನಡೆದ ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ನಾಯಕ ಫಾಫ್ ಡು ಪ್ಲೆಸಿಸ್ ಅವರ ಅಧ್ಭುತ ಹಾಗೂ ಏಕಾಂಗಿ ಬ್ಯಾಟಿಂಗ್ ಹಾಗೂ ಹಾಜ್ಲೇವುಡ್ ಅವರು ತೆಗೆದ 4 ವಿಕೇಟ್ಗಳ ಗುಚ್ಚದಿಂದ ಲಕ್ನೋ ಸೂಪರ್ ಜೇಂಟ್ಸ್ ತಂಡವನ್ನು ಮಣಿಸಿತು.