ನಾಳೆ ಗುರುವಾರ ಆರಂಭವಾಗಲಿದ್ದ ದಕ್ಷಿಣ ಆಫ್ರಿಕಾ ಟಿ-20 ಸರಣಿಯಿಂದ ತಂಡದ ನಾಯಕ ಕೆಎಲ್ ರಾಹುಲ್ ಹೊರಬಿದ್ದಿದ್ದಾರೆ. ಗಾಯಗೊಂಡಿರುವ ಕೆಎಲ್ ರಾಹುಲ್ ಆಡುತ್ತಿಲ್ಲ.
ನಾಯಕ ಕೆಎಲ್ ರಾಹುಲ್ ಜೊತೆ ಕುಲದೀಪ್ ಯಾದವ್ ಅವರೂ ಸಹಿತ ಈ ಸರಣಿಯಿಂದ ಹೊರಗೆ ಉಳಿದಿದ್ದಾರೆ. ರಿಷಬ್ ಪಂತ್ ಅವರನ್ನು ತಂಡದ ನಾಯಕ ಹಾಗೂ ಹಾರ್ದಿಕ್ ಪಟೇಲ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಸಮಿತಿ ನೇಮಕ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಭಾರತ ಕ್ರಿಕೆಟ್ ತಂಡ ಘೋಷಣೆ ಆಗಿತ್ತು. ಕನ್ನಡಿಗ ಕೆ ಎಲ್ ರಾಹುಲ್ ನಾಯಕರಾಗಿದ್ದರು.
ಭಾರತ ತಂಡ ಈ ರೀತಿ ಇದೆ:
ರಿಷಭ್ ಪಂತ್ (ವಿಕೇಟ್ ಕೀಪರ್/ ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರನ್ ಮಲಿಕ್
ನಾಳೆ ಗುರುವಾರ ಜೂನ್ 9 – ದೆಹಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ. ಅನಂತರ ಜೂನ್ 12 – ಕಟಕ್, 14 – ವಿಶಾಖಪಟ್ಟಣ, 17 – ರಾಜ್ಕೋಟ್ ಮತ್ತು ಜೂನ್ 19ರಂದು ಬೆಂಗಳೂರಲ್ಲಿ ಐದು ಟಿ-ಟ್ವೆಂಟಿ ಪಂದ್ಯ ನಡೆಯಲಿದೆ.