ರಾಜ್ಯ ರೈತ ಸಂಘದ ಅಧ್ಯಕ್ಷರೂ ಆಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರೈತ ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಗೌರವಾಧ್ಯಕ್ಷರಾಗಿದ್ದ ಬಸವರಾಜಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ,
ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಾರಿಗೆ ನೌಕರರ ಮುಷ್ಕರ ಹಿಂಪಡೆಯುವ ಸಲುವಾಗಿ 35 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಆರೋಪ ಸಂಬಂಧ ಕನ್ನಡದ ಖಾಸಗಿ ಸುದ್ದಿವಾಹಿನಿ ರಹಸ್ಯ ಕಾರ್ಯಾಚರಣೆ ಪ್ರಸಾರ ಮಾಡಿತ್ತು.
ರೈತ ಸಂಘದಿಂದ ಕೋಡಿಹಳ್ಳಿ ಉಚ್ಛಾಟನೆ ಆಮ್ ಆದ್ಮಿ ಪಾರ್ಟಿಗೂ ಭಾರೀ ಮುಜುಗರ ತಂದಿಟ್ಟಿದೆ. ಕಳೆದ ತಿಂಗಳು ಬೆಂಗಳೂರಲ್ಲಿ ನಡೆದಿದ್ದ ರೈತ ಸಮಾವೇಶದಲ್ಲಿ ಆಮ್ ಆದ್ಮಿ ಪಾರ್ಟಿಗೆ ಸೇರಿಕೊಂಡು ಆ ಪಕ್ಷದೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಕೋಡಿಹಳ್ಳಿ ಘೋಷಿಸಿದ್ದರು.
ಸ್ವತಃ ಅರವಿಂದ್ ಕೇಜ್ರಿವಾಲ್ ಅವರೇ ಕೋಡಿಹಳ್ಳಿ ಆಪ್ ಶಾಲು ಮತ್ತು ಟೋಪಿ ತೊಡಿಸಿ ಬರಮಾಡಿಕೊಂಡಿದ್ದರು.