ಟೆಲಿವಿಷನ್ ನಟ ಪಲ್ಲಬಿ ದೇವ್ ಆತ್ಮಹತ್ಯೆ ಮಾಡಿಕೊಂಡ ಸಾವನ್ನಪ್ಪಿದ ಕೇಲವೇ ದಿನಗಳಲ್ಲಿ ಕೊಲ್ಕತ್ತಾದ ಡುಮ್ಡುಮ್ ಏರಿಯಾದ ಪ್ಲ್ಯಾಟ್ನಲ್ಲಿ 21 ವರ್ಷದ ಮಾಡೆಲ್ ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಡಿಶಾ ಡಿ ಮುಜುಂದಾರ್ ಕೊಲ್ಕತ್ತಾಸ ನಗರ ಬಜಾರ್ನ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಮಾಡೆಲ್. ಮಂಗಳವಾರ ಸಾಯಂಕಾಲ ಅಕ್ಕಪಕ್ಕದವರು ಪ್ಲ್ಯಾಟ್ನ ಬಾಗಿಲು ಮುರಿಸು ನೋಡಿದಾಗ ಮಾಡೆಲ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಬಿಡಿಶಾ ಪ್ಲ್ಯಾಟ್ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ವೃತ್ತಿ ಅವಕಾಶಗಳ ಕೊರತೆಯಿಂದ ಆತ್ಮಹತ್ಯೆಯ ನಿರ್ಧಾರ ಮಾಡಿದ್ದೇನೆ ಎಂದು ಬರೆಯಲಾಗಿದೆ. ಈ ಬಗ್ಗೆ ಬರವಣಿಗೆಯ ತಜ್ಞರ ವರದಿ ಬಂದ ಬಳಿಕ ನಿಖರವಾಗಿ ಹೇಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮಾಡೆಲ್ ಬಿಡಿಶಾ ಕೊಲ್ಕತ್ತಾ ದಕ್ಷಿಣ ಭಾಗದವರು. ಈಕೆ ಮದುವೆಯ ಪೋಟೋಶೂಟ್ ಹಾಗೂ ಮೇಕಪ್ನಲ್ಲಿ ದೊಡ್ಡ ಹೆಸರು ಗಳಿಸಿದ್ದರು. ಈ ಘಟನೆಯ ಬಗ್ಗೆ ಮಾಡೆಲಿಂಗ್ ಸಹೋದ್ಯೋಗಿಗಳು ದು:ಖ ವ್ಯಕ್ತಪಡಿಸಿದ್ದಾರೆ.
ಖ್ಯಾತ ಟೆಲಿವಿಷನ್ ನಟ ಪಲ್ಲಬಿ ದೇವ್ ಅವರು ಇತ್ತೀಚೆಗಷ್ಟೇ ತಮ್ಮ ಪ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮಡೆಲ್ ಬಿಡಿಶಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಗೆಳೆಯನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.