ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಡಾರು ಬಜಿರೆ ಗ್ರಾಮದಲ್ಲಿ ಕೊರಗಜ್ಜ ಕಟ್ಟೆಗೆ ಬೆಂಕಿ ಹಾಕಿದ ಸಂಬಂಧ ಐವರ ಮೇಲೆ ಪ್ರಕರಣ ದಾಖಲಾಗಿದೆ.
ಕೃತ್ಯ ಸಂಬಂಧ ಬಾಡಾರು ನಿವಾಸಿ 48 ವರ್ಷದ ಹರೀಶ್ ಪೂಜಾರಿಯನ್ನು ಬಂಧಿಸಲಾಗಿದೆ. ಡಾ ರಾಜೇಶ್, ರಮೇಶ್ ಕುಡ್ಮೇರ್, ಓಂ ಪ್ರಸಾದ್ ಮತ್ತು ಪ್ರಶಾಂತ್ ಬಂಟ್ವಾಳ ಎಂಬವರ ಮೇಲೂ ಪ್ರಕರಣ ದಾಖಲಾಗಿದೆ.
ಸರ್ಕಾರಿ ಭೂಮಿಯಲ್ಲಿರುವ ಕೊರಗಜ್ಜ ಕಟ್ಟೆಗೆ ಬಾಡಾರು ಕೊರಗಕಲ್ಲು ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ಮೂಲಕ ಪೂಜೆ ನಡೆಸಲಾಗುತ್ತಿತ್ತು. ಈ ಕಟ್ಟೆಗೆ ಹರೀಶ್ ಪೂಜಾರಿ ಪೂಜೆ ಮಾಡುತ್ತಿದ್ದ. ಆದರೆ ಕಟ್ಟೆ ಇದ್ದ ಭೂಮಿಗೆ ಸಂಬಂಧಿಸಿದಂತೆ ವಿವಾದ ಉಂಟಾಗಿ ಕಟ್ಟೆಯನ್ನು ಒಡೆದುಹಾಕಿ ಹೊಸ ಕಟ್ಟೆ ಕಟ್ಟಲು ಹರೀಶ್ ಪೂಜಾರಿ ಯತ್ನಿಸಿದ್ದ.
ಆದರೆ ಇದಕ್ಕೆ ಟ್ರಸ್ಟ್ನ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ಭಕ್ತರು ಆಕ್ಷೇಪಿಸಿದ್ದರು. ಈ ದ್ವೇಷದಿಂದಲೇ ಹರೀಶ್ ಪೂಜಾರಿ ಕಟ್ಟೆಗೆ ಬೆಂಕಿ ಹಾಕಿದ್ದ ಎಂದು ಪ್ರದೀಪ್ ದೂರು ನೀಡಿದ್ದರು.
ಬಂಧಿತ ಹರೀಶ್ ಪೂಜಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಸುರೇಶ್ ಕುಮಾರ್, ಡಿವೈಎಸ್ಪಿ ಗಾನ ಕುಮಾರ್ ಮತ್ತು ಎಸ್ ಸೌಮ್ಯ ಭೇಟಿ ನೀಡಿ ಪರಿಶೀಲಿಸಿದರು.
ಈ ಕಟ್ಟೆ ಸರ್ಕಾರಿ ಭೂಮಿಯಲ್ಲಿರುವ ಹಿನ್ನೆಲೆಯಲ್ಲಿ ಕಟ್ಟೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ADVERTISEMENT
ADVERTISEMENT