ಕರ್ನಾಟಕ ರೇಷ್ಮೆ ಇಲಾಖೆ ಖಾಲಿ ಇರುವ 6 ಹುದ್ದೆಗಳನ್ನು ತುಂಬಿಕೊಳ್ಳಲು ಕೆಪಿಎಸ್ಸಿ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಇದೇ ಸೆಪ್ಟಂಬರ್ 17 ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ : ರೇಷ್ಮೆ ವಿಸ್ತೀರ್ಣಾಧಿಕಾರಿ (ಗ್ರೂಪ್ ಬಿ)
ಒಟ್ಟು ಹುದ್ದೆಗಳು : 06
ವಿದ್ಯಾರ್ಹತೆ : 1) ರೇಷ್ಮೆ ವಿಷಯದಲ್ಲಿ ಸ್ನಾತಕೋತ್ತರ ಪದವಿ, 2) ರೇಷ್ಮೆ ವಿಷಯದಲ್ಲಿ ಪದವಿ, 3) ವಿಜ್ಞಾನ ವಿಷಯದಲ್ಲಿ ಪದವಿ ಜೊತೆಗೆ ರೇಷ್ಮೆ ವಿಷಯದಲ್ಲಿ ಸ್ನಾಕೋತ್ತರ ಡಿಪ್ಲೋಮಾ 4) ಪದವಿ ವಿಜ್ಞಾನ ವಿಭಾಗದಲ್ಲಿ ಸಸ್ಯಶಾಸ್ತ್ರ, ಜೀವಶಾಸ್ತ್ರ ಅಥವಾ ರೇಷ್ಮೆ ವಿಷಯ ಅಧ್ಯಯನ ಮಾಡಿರಬೇಕು. ( ಮೇಲಿನ ವಿದ್ಯಾರ್ಹತೆಗಳನ್ನು ಕ್ರಮಬದ್ಧವಾಗಿ ಮೇಲಿನವರು ಲಭ್ಯವಿಲ್ಲದಿದ್ದಾಗ ಕೆಳಗಿನವರನ್ನು ಪರಿಗಣಿಸಲಾಗುತ್ತದೆ).
ಇದನ್ನೂ ಓದಿ : ಬಿಬಿಎಂಪಿಯಲ್ಲಿ ಉಪನ್ಯಾಸಕ, ಶಸ್ತ್ರ ಚಿಕಿತ್ಸಕಿ ಹುದ್ದೆಗೆ ಅರ್ಜಿ ಆಹ್ವಾನ – ಪೂರ್ಣ ವಿವರ ಇಲ್ಲಿದೆ
ಸಂಬಳ : 40900-78200 ಸಾವಿರ ರೂ.ಗಳು
ವಯಸ್ಸು : 18 ರಿಂದ 40 ವಯಸ್ಸು (ಆಯಾ ಪ್ರವರ್ಗಗಳಿಗಿರುವ ವಯಸ್ಸಿನ ಮಿತಿ ಪರಿಶೀಲಿಸಿ)
ಅರ್ಜಿ ಶುಲ್ಕ : ಸಾಮಾನ್ಯರಿಗೆ 600 ರೂ. 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 300 ರೂ, ಮಾಜಿ ಸೈನಿಕರಿಗೆ 50 ಮತ್ತು ಎಸ್ಸಿ, ಎಸ್ಟಿ, ಪ್ರವರ್ಗ 1 ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲ.
ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ
ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ : 17.09.22
ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ : 17.10.22
ಅರ್ಜಿ ಶುಲ್ಕ ತುಂಬಲು ಕೊನೆಯ ದಿನಾಂಕ : 18.10.22
ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್ಸಿ ಪ್ರಕಟಿಸಿರುವ ಅಧಿಕೃತ ನೋಟಿಫಿಕೇಷನ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಇದೇ ಸೆಪ್ಟಂಬರ್ 17 ರ ನಂತರ ಕೆಪಿಎಸ್ಸಿ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ : Health Department Jobs : 558 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ