ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗೆ (KPTCL) ನಡೆದ ಪರೀಕ್ಷೆಯಲ್ಲಿ ನಕಲು ವಿಚಾರ (Illegal Exam) ಸಂಬಂಧ ನಾಲ್ಕೂವರೆ ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಕಳುಹಿಸಲು ಗದಗ ಮುನ್ಸಿಪಲ್ ಕಾಲೇಜು ಉಪ ಪ್ರಾಂಶುಪಾಲ ಮಾರುತಿ ಜತೆಗೆ ಡೀಲ್ ಮಾಡಿದ್ದರು ಎಂದು ತಿಳಿದುಬಂದಿದೆ.
ಡೀಲ್ ನಡೆದದ್ದು ಹೇಗೆ..?
ಮಾರುತಿ ಮಗ ಸಮಿತಕುಮಾರ್ ಸೋನವಣಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ್ದ. ಒಬ್ಬೊಬ್ಬ ಅಭ್ಯರ್ಥಿಗಳಿಗೆ ಎಂಟು ಲಕ್ಷಕ್ಕೆ ಡೀಲ್ ಮಾಡಿದ್ದು, ಕಿಂಗ್ ಪಿನ್ ಸಂಜು ಭಂಡಾರಿ ಜತೆಗೆ ಅಭ್ಯರ್ಥಿಗಳು ಹಣದ ವ್ಯವಹಾರ ಮಾಡಿದ್ದರು. ಕೀ ಆನ್ಸರ್ ಬಂದಕೂಡಲೇ ಮೂರು ಲಕ್ಷ, ರಿಸಲ್ಟ್ ಬಂದ ನಂತರ ಐದು ಲಕ್ಷ ನೀಡುವಂತೆ ಒಪ್ಪಂದ ಮಾಡಲಾಗಿದೆ. ಆರೋಪಿ ಸುನೀಲ್ ಭಂಗಿ ಪರೀಕ್ಷಾರ್ಥಿಗಳನ್ನ ಸಂಜು ಭಂಡಾರಿಗೆ ಪರಿಚಯ ಮಾಡ್ತಿದ್ದ. ಹೀಗೆ ಪರೀಕ್ಷೆ ಪಾಸ್ ಮಾಡಿಸಿ ಕೊಡುವ ಡೀಲ್ ಮಾಡಿ ಕಿಂಗ್ ಪಿನ್ ಸಂಜು ಕೋಟ್ಯಾಂತರ ಹಣ ಸಂಪಾದಿಸಿದ್ದ. ಕಳೆದ ವರ್ಷ ಸಿವಿಲ್ ಪೊಲೀಸ್ ಕಾಂಸ್ಟೆಬಲ್ ಪರೀಕ್ಷೆಯಲ್ಲಿ ನಕಲು ಮಾಡಿಸಿ ಸಂಜು ಭಂಡಾರಿ ಅರೆಸ್ಟ್ ಕೂಡ ಆಗಿದ್ದ.
ಜಾಮೀನು ಮೇಲೆ ಹೊರ ಬಂದು ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲೂ ನಕಲು ಮಾಡಿದ್ದು, ಸದ್ಯ ತಲೆಮರೆಸಿಕೊಂಡಿರುವ ಸಂಜು ಭಂಡಾರಿಗೆ ಶೋಧಕಾರ್ಯ ಮುಂದುವರೆದಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನಿಂದ ಪ್ರಶ್ನೆಪತ್ರಿಕೆ ಲೀಕ್ (Illegal Exam) ಮಾಡಿದ್ದು, ಮುನ್ಸಿಪಲ್ ಕಾಲೇಜು ಉಪಪ್ರಾಂಶುಪಾಲ, ಆತನ ಮಗ ಮತ್ತು ರೂಮ್ ಸುಪರ್ ವೈಸರ್ನಿಂದ ಪತ್ರಿಕೆ ಸೋರಿಕೆ ಮಾಡಲಾಗಿದೆ. ಗೈರಾದ ಅಭ್ಯರ್ಥಿ ಪ್ರಶ್ನೆ ಪತ್ರಿಕೆಯ ಪೋಟೊ ತೆಗೆದು ಕ್ಯಾಮ್ ಸ್ಕ್ಯಾನರ್ದಿಂದ ಕಿಂಗ್ ಪಿನ್ ಸಂಜು ಭಂಡಾರಿ ಮೊಬೈಲ್ಗೆ ಪೇಪರ್ ರವಾನೆ ಮಾಡಲಾಗಿದೆ.
ಅಕ್ರಮದಲ್ಲಿ ಭಾಗಿಯಾದವರ ಬಂಧನ :
ಗೋಕಾಕ್ ಡಿವೈಎಸ್ಪಿ ಮನೋಜಕುಮಾರ್ ನಾಯಕ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದವರನ್ನು ಬಂಧಸಿದ್ದಾರೆ . ಈವರೆಗೂ ಪ್ರಕರಣದಲ್ಲಿ ಮೂರು ಜನ ಅಭ್ಯರ್ಥಿ ಸೇರಿ 12 ಜನ ಆರೋಪಿಗಳ ಬಂಧನ ಮಾಡಲಾಗಿದೆ.
ಕೆಪಿಟಿಸಿಎಲ್ನ 1400 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಗೆ ರಾಜ್ಯಾದ್ಯಂತ 3ಲಕ್ಷ ಜನ ಅಭ್ಯರ್ಥಿಗಳು ಹಾಜರಾಗಿದ್ದರು.