ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ (KPTCL Recruitment Scam) ಸಂಬಂಧ ವಿವಿಧ ಬಗೆಯ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ದೇವಸಂದ್ರದ ಮೊಹಮ್ಮದ್ ಅಜೀಮುದ್ದಿನ್ ಬಂಧಿತ ಆರೋಪಿ. ಆ ಮೂಲಕ ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಅಕ್ರಮದಲ್ಲಿ ಬಂಧಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಿಂಗ್ಪಿನ್ ಸಂಜು ಭಂಡಾರಿ ಹಾಗೂ ಬೆಳಗಾವಿಯ ಇತರರಿಗೆ ಆರೋಪಿ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸುತ್ತಿದ್ದ.
ಕೇಂದ್ರ-ರಾಜ್ಯ ಸರ್ಕಾರಗಳಿಂದ ಈವರೆಗೆ ನಡೆದ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಕೆ ಶಂಕೆ ವ್ಯಕ್ತವಾಗಿದೆ. ಪರೀಕ್ಷೆಗಳಲ್ಲಿ ಅಕ್ರಮ ಎಸಗಲು ಎಲೆಕ್ಟ್ರಾನಿಕ್ ಉಪಕರಣಗಳ ಪೂರೈಕೆ ಆರೋಪ ಮಾಡಿದ್ದು, ಬೆಂಗಳೂರಿನ ಎಸ್ಪಿ ರಸ್ತೆಯಲ್ಲಿ ಸ್ಪೈ ಜೋನ್ ಎಲೆಕ್ಟ್ರಾನಿಕ್ ಮಳಿಗೆಯನ್ನು ಆರೋಪಿ ಹೊಂದಿದ್ದಾನೆ. ಇದನ್ನೂ ಓದಿ : ಕೆಪಿಟಿಸಿಎಲ್ ಅಕ್ರಮ : ಪ್ರತಿ ಅಭ್ಯರ್ಥಿಗಳಿಂದ 8 ಲಕ್ಷಕ್ಕೆ ಡೀಲ್
ಅಕ್ರಮವಾಗಿ ಎಲೆಕ್ಟ್ರಾನಿಕ್ ಸೂಕ್ಷ್ಮ ಉಪಕರಣ ಖರೀದಿಸುತ್ತಿದ್ದ. ದೆಹಲಿ, ಹೈದರಾಬಾದ್ನ ಡೀಲರ್ಗಳಿಂದ ಅಕ್ರಮವಾಗಿ ಉಪಕರಣಗಳ ಖರೀದಿ ಮಾಡಲಾಗುತ್ತಿತ್ತು. ಮಹಮ್ಮದ್ ಅಜೀಮುದ್ದೀನ್ ಬಳಿ ಸಂಜು ಭಂಡಾರಿ ಇಲೆಕ್ಟ್ರಾನಿಕ್ ಉಪಕರಣ ಖರೀದಿಸುತ್ತಿದ್ದ. ಅಭ್ಯರ್ಥಿಗಳಿಂದ ಹಣ ಪಡೆದು ಬ್ಲೂಟೂತ್, ಸ್ಮಾರ್ಟ್ ವಾಚ್ ಪೂರೈಸುತ್ತಿದ್ದ.
ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಗೋಕಾಕ್ನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ (KPTCL Recruitment Scam) ನಡೆದಿದೆ ಎಂಬ ಬಗ್ಗೆ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಪೊಲೀಸರು ಅಕ್ರಮ ನಡೆಸಿರುವುದು ತಿಳಿದುಬಂದಿತ್ತು. ಆ ಬೆನ್ನಲ್ಲೇ, ಅಗಸ್ಟ್ 22 ರಂದು 9 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ : ವಿಜಯಪುರ: ಕೆಪಿಟಿಸಿಎಲ್ ಎಇಇ ಅಧಿಕಾರಿ ಮನೆ ಮೇಲೆ ದಾಳಿ