ಚಲಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ನ ಚಕ್ರಗಳೇ ತುಂಡಾಗಿ ವ್ಹೀಲ್ ಬಾಡಿ ಸಮೇತ ಉರುಳಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಾಗಡಿ ಸಮೀಪ ಅವಘಡ ನಡೆದಿದೆ.
ಚಲಿಸುತ್ತಿದ್ದ ಬಸ್ನ ಹಿಂಭಾಗದ ವ್ಹೀಲ್ ಬಾಡಿಯೇ ಕಟ್ ಆಗಿ ರಸ್ತೆಯ ಇನ್ನೊಂದು ಬದಿಗೆ ನುಗಿದರೆ, ಬಸ್ ರಸ್ತೆ ಪಕ್ಕದಲ್ಲಿದ್ದ ತಗ್ಗು ಪ್ರದೇಶಕ್ಕೆ ನುಗ್ಗಿದೆ. ಹಿಂಭಾಗದ ವ್ಹೀಲ್ ಬಾಡಿಯೇ ಕಟ್ ಆಗಿದ್ದರಿಂದ ಬಸ್ನ ಹಿಂಭಾಗ ಡಾಂಬರು ರಸ್ತೆಗೆ ಟಚ್ ಆಗಿ ಅಲ್ಲೇ ನಿಂತಿದೆ. ಪಕ್ಕದಲ್ಲೇ ದೊಡ್ಡದೊಂದು ಕೆರೆ ಕೂಡಾ ಇತ್ತು.
ADVERTISEMENT
ADVERTISEMENT