ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಅನಿರೀಕ್ಷಿತವಾಗಿ ಏರಿಕೆ ಆಗಿದೆ. ಗಣನೀಯ ಪ್ರಯಾಣದಲ್ಲಿ ಟಿಕೆಟ್ ಬೆಲೆ ಏರಿಸಿ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಆಘಾತ ನೀಡಿದೆ. ಈ ದರ ಹೆಚ್ಚಳ ಬೆಂಗಳೂರಿನಿAದ ರಾಜ್ಯ ಮತ್ತು ಹೊರರಾಜ್ಯದ ವಿವಿಧ ಊರುಗಳಿಗೆ ಸಂಚರಿಸುವ ಸಲುವಾಗಿ ಆನ್ಲೈನ್ ಬುಕ್ಕಿಂಗ್ ಪ್ರಯಾಣ ಮಾಡುವ ಅನ್ವಯ ಆಗುತ್ತಿದೆ.
ನಮ್ಮ ಅನುಭವಕ್ಕೆ ಬಂದಿರುವ ಉದಾಹರಣೆಯೊಂದಿಗೆ ಕೆಎಸ್ಆರ್ಟಿಸಿ ಹೇಗೆ ಖಾಸಗಿ ಬಸ್ಗಳಂತೆ ಮತ್ತು ಖಾಸಗಿ ಬಸ್ಗಳ ಆನ್ಲೈನ್ ಬುಕ್ಕಿಂಗ್ಗಳನ್ನು ನಿರ್ವಹಿಸುವ ಮೇಕ್ಮೈ ಟ್ರಿಪ್ ಮತ್ತು ರೆಡ್ಬಸ್ ಪೋರ್ಟಲ್ಗಳ ರೀತಿಯಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ ಎಂಬುದನ್ನು ವಿವರಿಸುತ್ತೇವೆ.
ಉದಾಹರಣೆಯೊಂದಿಗೆ:
ಉದಾಹರಣೆಗೆ ಮಾರ್ಚ್ 29ರಂದು (ಗುರುವಾರ) ಬೆಂಗಳೂರಿನಿAದ ಕಾರ್ಕಳಕ್ಕೆ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ನಲ್ಲಿ ಇದ್ದ ಟಿಕೆಟ್ ದರ 648 ರೂಪಾಯಿ. ಈಗ ನೀವು ಕೆಎಸ್ಆರ್ಟಿಸಿ ಆನ್ಲೈನ್ ಬುಕ್ಕಿಂಗ್ ಪೋರ್ಟಲ್ಗೆ ಹೋದರೆ ಬೆಂಗಳೂರಿನಿAದ ಕಾರ್ಕಳಕ್ಕೆ ವಾರದ ದಿನಗಳಲ್ಲಿ (ಉದಾಹರಣೆಗೆ ಏಪ್ರಿಲ್ 21, ವಾರ-ಗುರುವಾರ) ನಾನ್ ಎಸಿ ಸ್ಲೀಪರ್ಗೆ ಕೊಡಬೇಕಾಗಿರುವ ಟಿಕೆಟ್ವೊಂದರ ಮೊತ್ತ 778 ರೂಪಾಯಿ. ಅಂದರೆ ಟಿಕೆಟ್ ದರ 90 ರೂಪಾಯಿಯಷ್ಟು ಹೆಚ್ಚಳ ಆಗಿದೆ.
ಶುಕ್ರವಾರದಂದು ಬೇರೆಯೇ ಟಿಕೆಟ್ ದರ..!
ನಾವು ಮೇಲೆ ಹೇಳಿದ್ದು ವಾರದ ದಿನ ಅಂದರೆ ಗುರುವಾರದವೆರೆಗಿನ ದರವಷ್ಟೇ. ಶುಕ್ರವಾರ (ಅಂದರೆ ಏಪ್ರಿಲ್ 22ರಂದು) ಪ್ರಯಾಣಿಸಿದರೆ ಆ ಟಿಕೆಟ್ ದರವೇ ಬೇರೆ. ಶುಕ್ರವಾರ ನೀವು ಬೆಂಗಳೂರಿನಿAದ ಕಾರ್ಕಳಕ್ಕೆ ಹೊರಡುವುದಾದರೆ ಟಿಕೆಟ್ ದರ 852 ರೂ. ಅಂದರೆ ಈ ಹಿಂದೆ ಇದ್ದ ಟಿಕೆಟ್ ದರಕ್ಕಿಂತ 252 ರೂಪಾಯಿ ಹೆಚ್ಚಳ. ಗುರುವಾರ ಮತ್ತು ಶುಕ್ರವಾರ ಒಂದು ದಿನದ ಅಂತರದಲ್ಲಿ ಟಿಕೆಟ್ ದರ 74 ರೂಪಾಯಿ ಹೆಚ್ಚಳ ಆಗಿದೆ.
ರಾಜಹಂಸ ಟಿಕೆಟ್ ದರ ಕೂಡಾ ಗಣನೀಯ ಏರಿಕೆ ಆಗಿದೆ. ಬೆಂಗಳೂರಿನಿAದ ಕಾರ್ಕಳಕ್ಕೆ ಭಾನುವಾರದಿಂದ ಗುರುವಾರದವರೆಗೆ ರಾಜಹಂಸದಲ್ಲಿ ಟಿಕೆಟ್ ದರ ರೂ. 653 (ಮಾರ್ಚ್ನಲ್ಲಿದ್ದ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ಗಿಂತಲೂ ದುಬಾರಿ).
ಏಪ್ರಿಲ್ 22ರಂದು ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಟಿಕೆಟ್ ದರ ಕ್ರಮವಾಗಿ ದರ: ರೂ. 852 ಮತ್ತು ರೂ. 715
ಏಪ್ರಿಲ್ 21ರಂದು ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಟಿಕೆಟ್ ದರ ಕ್ರಮವಾಗಿ ದರ: ರೂ. 778 ಮತ್ತು ರೂ. 653
ಶುಕ್ರವಾರ ರಾಜಹಂಸ ಟಿಕೆಟ್ ದರ ಬೆಂಗಳೂರಿನಿAದ ಕಾರ್ಕಳಕ್ಕೆ 715 ರೂಪಾಯಿ. ಅಂದರೆ ಒಂದೇ ದಿನದಲ್ಲಿ 62 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ.
ಮಾರ್ಚ್ 29ರಂದು ಇದ್ದ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ದರ: ರೂ. 648
ಆನ್ಲೈನ್ ಬುಕ್ಕಿಂಗ್ ವೇಳೆ ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್ ಟಿಕೆಟ್ ದರ ಗಣನೀಯ ಏರಿಕೆಯ ಜೊತೆಗೆ ಶುಕ್ರವಾರವೇ ಬೆಂಗಳೂರು ಬಿಟ್ಟು ಊರಿಗೆ ಹೋಗುವ ಪ್ರಯಾಣಿಕರಿಗೆ ಅವತ್ತೊಂದು ದಿನಕ್ಕೆ ಅನ್ವಯ ಆಗುವಂತೆ ಇನ್ನಷ್ಟು ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.
ಖಾಸಗಿ ಬಸ್ಗಳ ಬುಕ್ಕಿಂಗ್ಗಳು ಕೂಡಾ ಶುಕ್ರವಾರ ದುಬಾರಿ ಆಗಿರುತ್ತವೆ. ಮೇಕ್ಮೈಟ್ರಿಪ್ ಮತ್ತು ರೆಡ್ಬಸ್ನಲ್ಲಿ ಬಹುತೇಕ ಎಲ್ಲ ಬಸ್ಗಳ ಪ್ರಯಾಣ ದರ ಬೆಂಗಳೂರು-ಕಾರ್ಕಳ ಮಾರ್ಗದಲ್ಲಿ 900 ರೂಗಿಂತ 1,200 ರೂಪಾಯಿವರೆಗೆ ಇದೆ.
ಖಾಸಗಿ ಬಸ್ಗಳು ದುಬಾರಿ ಎಂಬ ಕಾರಣಕ್ಕೆ ದೂರ ಊರಿನ ಪ್ರಯಾಣಿಕರು ಕೆಎಸ್ಆರ್ಟಿಸಿ ನಾನ್ ಎಸಿ ಸ್ಲೀಪರ್ ಕಡೆ ಮುಖ ಮಾಡಿದ್ದರು. ಅಗ್ಗದ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣ ಎಂಬ ಕಾರಣಕ್ಕೆ ಕೆಎಸ್ಆರ್ಟಿಸಿಗೆ ಪ್ರಯಾಣಿಕರು ಹೆಚ್ಚಾದರು. ಆದರೆ ಈ ಹೆಚ್ಚಳವನ್ನೇ ದಾಳವಾಗಿ ಬಳಸಿಕೊಂಡಿರುವ ಕೆಎಸ್ಆರ್ಟಿಸಿ ಈಗ ಖಾಸಗಿ ಬಸ್ಗಳಂತೆ ದರ ಏರಿಸಿ ಪ್ರಯಾಣಿಕರಿಗೆ ಆಘಾತ ನೀಡಿದೆ.
ನಿಮ್ಮ ಅನುಭವವನ್ನೂ ಬರೆದು ತಿಳಿಸಿ ಈ ಸುದ್ದಿಗೆ ಕಮೆಂಟ್ ಮಾಡುವ ಮೂಲಕ.