ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲೂ ಹಿಂದಿ ಹೇರಿಕೆಯನ್ನು ಚಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವೂ ಮುಂದುವರಿಸಿದೆ.
ಕೆಎಸ್ಆರ್ಟಿಸಿ ಬಸ್ಗಳ ಮಾರ್ಗ ಫಲಕಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಜೊತೆಗೆ ಹಿಂದಿಯನ್ನೂ ಬಳಸುವುದನ್ನು ಸಮರ್ಥಿಸಿಕೊಂಡು ಮಂಗಳೂರು-3ನೇ ಘಟಕದ ಡಿಪೋ ಮ್ಯಾನೇಜರ್ ಉತ್ತರ ನೀಡಿದ್ದಾರೆ.
ಉತ್ತರ ಭಾರತದಿಂದ ಮಂಗಳೂರು ಕಡೆಗೆ ಬರುವ ಪ್ರಯಾಣಿಕರಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಬಾರದ್ದೇ ಇದ್ದಲ್ಲಿ ಅವರಿಗೆ ಅನುಕೂಲವಾಗಲು ನಮ್ಮ ರಾಷ್ಟ್ರಭಾಷೆ ಹಿಂದಿಯನ್ನು ಸೇರಿಸಿರುತ್ತಾರೆ
ಎಂದು ಮಾರ್ಚ್ 7ರಂದು ಕೆಎಸ್ಆರ್ಟಿಸಿಗೆ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ಜೂನ್ 1ರಂದು ಡಿಪೋ ಮ್ಯಾನೇಜರ್ ಉತ್ತರಿಸಿದ್ದಾರೆ.
ಮೇ 20ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ಆರಂಭವಾಯಿತು.
ವಿಧಾನಸಭಾ ಚುನಾವಣೆಯ ವೇಳೆ ಕನ್ನಡ ಅಸ್ಮಿತತೆಯನ್ನೂ ಕಾಂಗ್ರೆಸ್ ಚುನಾವಣಾ ಅಸ್ತ್ರವಾಗಿಸಿಕೊಂಡಿತ್ತು.
ಆದರೆ ಅಧಿಕಾರಕ್ಕೆ ಬಂದ ಬಳಿಕವೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸುಪರ್ದಿಗೆ ಬರುವ ಸಾರಿಗೆ ಇಲಾಖೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿ ಉತ್ತರ ಭಾರತೀಯರ ಅನುಕೂಲಕ್ಕಾಗಿ ಮಾರ್ಗ ಫಲಕಗಳಲ್ಲಿ ಬಳಸುತ್ತಿರುವುದಾಗಿ ಸಮರ್ಥಿಸಿಕೊಂಡಿದೆ.
ADVERTISEMENT
ADVERTISEMENT