ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ನೌಕರರಿಗೂ 6 ತಿಂಗಳು ಅಥವಾ 180 ದಿನಗಳ ಗರಿಷ್ಠ ಶಿಶುಪಾಲನಾ ರಜೆಯನ್ನು ಮಂಜೂರು ಮಾಡುವ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ಆದೇಶ ಹೊರಡಿಸಿದೆ.
ಒಂಟಿ ಪೋಷಕರಾಗಿರುವ, ಅವಿವಾಹಿತ ಅಥವಾ ವಿಚ್ಛೇದಿತ ಅಥವಾ ವಿಧುರ (ಪತ್ನಿಯನ್ನು ಕಳೆದುಕೊಂಡಿರುವ) ಪುರುಷ ನೌಕರರಿಗೆ ನೀಡಲಾಗಿರುವ ಶಿಶುಪಾಲನಾ ರಜೆಯನ್ನು ಕೆಎಸ್ಆರ್ಟಿಸಿ ನೌಕರರಿಗೂ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಈ ಮೂಲಕ ಕೆಎಸ್ಆರ್ಟಿಸಿ ನೌಕರರು ಕೂಡಾ ತಮ್ಮ ಸೇವಾವಧಿಯಲ್ಲಿ 6 ತಿಂಗಳ ಗರಿಷ್ಠ ಶಿಶುಪಾಲನಾ ರಜೆಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.
ಆದರೆ ಒಂದು ವೇಳೆ ಈ ಶಿಶುಪಾಲನಾ ರಜೆ ಪಡೆದ ಸಂದರ್ಭದಲ್ಲಿ ಅಂತಹ ಶಿಶುಪಾಲನಾ ರಜೆಯನ್ನು ಪಡೆದಿರುವ ಕೆಎಸ್ಆರ್ಟಿಸಿ ನೌಕರ ಮರು ಮದುವೆ ಆದಲ್ಲಿ ಆ ಶಿಶುಪಾಲನಾ ರಜೆ ತಾನಾಗಿಯೇ ರದ್ದುಗೊಳ್ಳುತ್ತದೆ ಎಂದು ಕೆಎಸ್ಆರ್ಟಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.
ADVERTISEMENT
ADVERTISEMENT