ಕುಮಾರಸ್ವಾಮಿ ಅವರದ್ದು ಜಾತ್ಯಾತೀತ ಪಕ್ಷವಾ..? ಕುಮಾರಸ್ವಾಮಿಯವರಿಗೆ ಸೈದ್ಧಾಂತಿ ಬದ್ಧತೆ ಇದೆಯೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ 4 ನೇ ಸ್ಥಾನಕ್ಕೆ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನಡೆದ ಮಾತುಕತೆಗಳ ಫಲಪ್ರದವಾಗಿಲ್ಲ. ಇದೀಗ, ಸಿದ್ದರಾಮಯ್ಯನವರು ಕುಮಾರಸ್ವಾಮಿಯವರಿಗೆ ಸೈದ್ಧಾಂತಿ ಬದ್ಧತೆ ಇದ್ದರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು,
ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಇದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ, ನಮ್ಮದು ಜಾತ್ಯಾತೀತ ಪಕ್ಷ. ಕುಮಾರಸ್ವಾಮಿ ಅವರದ್ದೂ ಜಾತ್ಯಾತೀತ ಪಕ್ಷ ಅಲ್ವಾ?
ಕಾಂಗ್ರೆಸ್ ಪಕ್ಷ ಬೆಂಬಲಿಸದೆ ಹೋಗಿದ್ದರೆ ಹೆಚ್ಡಿ ದೇವೇಗೌಡ ಪ್ರಧಾನಿಯಾಗುತ್ತಿದ್ದರಾ? ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದಾಗ ನಾವು ಅಭ್ಯರ್ಥಿಯನ್ನೇ ಹಾಕದೆ ಅವರನ್ನು ಗೆಲ್ಲಿಸಿಲ್ವೇ?. ಜೆಡಿಎಸ್ ಪಕ್ಷದ 37 ಜನ ಶಾಸಕರಿದ್ದರೂ ನಾವು ಕುಮಾರಸ್ವಾಮಿಗೆ ಬೆಂಬಲ ನೀಡಿ ಅವರನ್ನು ಮುಖ್ಯಮಂತ್ರಿ ಮಾಡಿಲ್ವಾ? ಇದು ನಮ್ಮ ಸೈದ್ಧಾಂತಿಕ ಬದ್ಧತೆ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.