ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಶೇಕಡಾ 40ರಷ್ಟು ಲಂಚ ಆರೋಪ ಮಾಡಿದ್ದ ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತರೂ ಆಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ.
ಸAತೋಷ್ ಪಾಟೀಲ್ ಮನೆಗೆ ಭೇಟಿ ನೀಡಿ ಆಕೆಯ ಪತ್ನಿ ಮತ್ತು ಕುಟುಂಬಕ್ಕೆ ಧೈರ್ಯ ಹೇಳಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, `ಈಶ್ವರಪ್ಪ ಅವರನ್ನು ಅರೆಸ್ಟ್ ಮಾಡಬೇಕು ಮತ್ತು ಈಶ್ವರಪ್ಪ ಅವರೇ ಸ್ವಯಂಪ್ರೇರಿತರಾಗಿ ರಾಜೀನಾಮೆ ಕೊಡಬೇಕು’ ಆಗ್ರಹಿಸಿದ್ದಾರೆ.
`ಇದು ನನ್ನದೇ ಕ್ಷೇತ್ರವಾದರೂ ನನ್ನ ಗಮನಕ್ಕೆ ತರದೇ ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್ದ ಮುನ್ನೋಳಕರ್, ಪಿಡಿಒ ಇವರೆಲ್ಲರ ಕುಮ್ಮಕ್ಕಿನಿಂದ ಏನೋ ಮಂತ್ರಿಗಳು ಧೈರ್ಯ ಕೊಟ್ರು, ಇನ್ನೊಬ್ಬರು ಧೈರ್ಯ ಕೊಟ್ರು ಅಂತ ನಾಲ್ಕು ಕೋಟಿ ಕೆಲಸ ಮಾಡಿದ್ರು’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
`ನಾವು ಯಾವುದೇ ಕಾಮಗಾರಿ ಗುದ್ದಲಿ ಪೂಜೆ ಮಾಡಬೇಕಂದ್ರೆ ಗ್ರಾಮಪಂಚಾಯತಿ ಅನುಮತಿ ಪಡೆಯಬೇಕಲ್ವಾ..? ಪಿಡಿಒ ಏನ್ ಮಾಡ್ತಿದ್ದ..? ಸಂಬAಧಿಸಿದ ಇಂಜಿನಿಯರ್ಗಳು ಏನ್ ಮಾಡ್ತಿದ್ರು..?
ಗ್ರಾಮ ಪಂಚಾಯತಿ ಅಧ್ಯಕ್ಷರು ಇದಕ್ಕೆ ಹೊಣೆಗಾರರಾಗುತ್ತಾರೆ. 40 ಪರ್ಸೆಂಟ್ ಕಮಿಷನ್ ಕೇಳಿದ್ರು ಎಂದು ಈಶ್ವರಪ್ಪ ವಿರುದ್ಧ ಡೆತ್ನೋಟ್ನಲ್ಲಿ ಹೇಳಿದ್ದಾರೆ, ಅವರೂ ಹೊಣೆಗಾರರಾಗುತ್ತಾರೆ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
`ಇದು ಸೂಸೈಡ್ ಅಲ್ಲ ಕೊಲೆ ಎಂದು ಸಂತೋಷ ಪತ್ನಿ ಹೇಳಿದ್ದಾರೆ. ನನ್ನ ಪತಿ ಧೈರ್ಯವಂತ, ಹತ್ಯೆಯಾಗಿದೆ ಎಂದು ಅವರ ಪತ್ನಿ ಹೇಳಿದ್ದಾರೆ. ರಾಜೀನಾಮೆ ಪರಿಹಾರ ಅಲ್ಲ, ಹೋದಂತ ಜೀವ ಮರಳಿ ಬರಲ್ಲ. ಇದ್ದಂತ ಜೀವಗಳಿಗೆ ಒಳ್ಳೆಯ ಭವಿಷ್ಯ ಕಲ್ಪಿಸಿ ಕೊಡಬೇಕು’
`ಈಶ್ವರಪ್ಪನಂತವರು ರಾಜಕಾರಣದಲ್ಲಿ ಇರಲು ನಾಲಾಯಕ್. ಅವರು ಅರೆಸ್ಟ್ ಆಗಬೇಕು. ಟೆಂಡರ್ ವ್ಯವಸ್ಥೆಯಲ್ಲಿ ವರ್ಕ್ ಆರ್ಡರ್, ಪ್ರೊಟೊಕಾಲ್ ಇದೆ. ಈಗ ಆ ಹಣ ಹೇಗೆ ಬರಲು ಸಆಧ್ಯ..? ಇವರಿಗೆ ಯಾರು ಕುಮ್ಮಕ್ಕು ಕೊಟ್ಟರು ಅದು ತನಿಖೆ ಆಗಬೇಕಾಗುತ್ತೆ. 4 ಕೋಟಿ ಕೆಲಸ ಆಗ್ತಿದೆ ಎಂದು ನನಗೆ ಗೊತ್ತಿತ್ತು, ಹೊರತು ಟೆಂಡರ್ ಪ್ರಕ್ರಿಯೆ ಆಗಲಿ ಬಿಡ್ಡಿಂಗ್ ಆಗಲಿ ಗೊತ್ತಿರಲಿಲ್ಲ.
ರಾಜಕಾರಣ ಮನೆ ಹೊರಗೆ ಇಟ್ಟು ಒಬ್ಬ ಅಕ್ಕ ಆಗಿ ನಿನ್ನ ಜೊತೆ ಇರ್ತೀನಿ ಎಂದಿದ್ದೇನೆ. ತಾಯಿ ಸ್ಥಾನದಲ್ಲಿ ನಿಂತು ಆ ಹುಡುಗಿ, ಮಗುಗೆ ನಾನು ನಿಂತುಕೊಳ್ತೀನಿ, ಹೋರಾಟ ಮುಂದುವರಿಯುತ್ತೆ’ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.