ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸಮೀಪದ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-69 ರಲ್ಲಿ ಗುಡ್ಡ ಕುಸಿತದ ಕಾರಣ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ
ರಸ್ತೆಯ ಕೆಳಭಾಗದ ಗುಡ್ಡ ಕುಸಿದ್ದರಿಂದ ಅರ್ಧದಷ್ಟು ರಸ್ತೆಯೂ ಕುಸಿತವಾಗಿದೆ. ಇದರಿಂದಾಗಿ ಹೊನ್ನಾವರದಿಂದ ಗೇರುಸೊಪ್ಪ ಮಾರ್ಗವಾಗಿ ಸಿದ್ದಾಪುರ, ತಾಳಗುಪ್ಪಕ್ಕೆ ಸಂಚರಿಸುವ ಮಾರ್ಗ ಕಡಿತವಾಗಿದೆ.
ಗೇರುಸೊಪ್ಪ ಗ್ರಾಮದಿಂದ ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಗ್ರಾಮದವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ. ಹೊನ್ನಾವರದಿಂದ ಸಿದ್ದಾಪುರ, ಜೋಗ, ಸಾಗರ ಕಡೆಗೆ ಹೋಗುವ ವಾಹನಗಳು ಕುಮಟಾ- ಸಂತೆಗುಳಿ ಮಾರ್ಗವಾಗಿ ಸಿದ್ದಾಪುರಕ್ಕೆ ತೆರಳಬಹುದು ಎಂದು ತಾಲ್ಲೂಕಾಡಳಿತ ತಿಳಿಸಿದೆ.