ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.
ಇವತ್ತು ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯೆಯಾಗಿ ಲತಾ ಮಲ್ಲಿಕಾರ್ಜುನ್ ಅವರ ಸೇರ್ಪಡೆಯನ್ನು ಶಾಸಕಾಂಗ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದರು.
ಲತಾ ಮಲ್ಲಿಕಾರ್ಜುನ್ ಅವರ ಸೇರ್ಪಡೆಯೊಂದಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ನ ಬಲಾಬಲ 136ಕ್ಕೆ ಏರಿಕೆ ಆಗಿದೆ.
ಕಾಂಗ್ರೆಸ್ನಿಂದ ಟಿಕೆಟ್ ಸಿಗದ ಕಾರಣ ಲತಾ ಮಲ್ಲಿಕಾರ್ಜುನ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಇವರು ಬಿಜೆಪಿ ಅಭ್ಯರ್ಥಿ ಜಿ ಕರುಣಾಕರ ರೆಡ್ಡಿ ವಿರುದ್ಧ 13,845 ಮತಗಳಿಂದ ಲತಾ ಅವರು ಗೆದ್ದಿದ್ದರು.
ಲತಾ ಮಲ್ಲಿಕಾರ್ಜುನ್ ಅವರು ಉಪಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ ಪಿ ಪ್ರಕಾಶ್ ಅವರ ಮಗಳು.
ADVERTISEMENT
ADVERTISEMENT