ಲೇಪಾಕ್ಷಿ.. ಶಿಲ್ಪ ಸೌಂದರ್ಯ.. ನಿಮ್ಮನ್ನು ವಾಹ್ ಎನ್ನುವಂತೆ ಮಾಡುವ ಚಿತ್ರಕಲಾ ನೈಪುಣ್ಯದ ನಿಲಯ ಕೂಡ ಹೌದು.
ಸುಮಾರು 400 ವರ್ಷಗಳಾದರೂ ಒಂದಿನಿತೂ ಹಾಳಾಗದ ವರ್ಣಚಿತ್ರಗಳು.. ಭಾರಿ ಗಾತ್ರದ ನಂದಿವಿಗ್ರಹ.. ಏಳು ಹೆಡೆಯ ಹಾವಿನ ನೆರಳಿನಲ್ಲಿರುವ ಶಿವಲಿಂಗ.. ಇಂತಹ ಅದೆಷ್ಟೋ ಆಕರ್ಷಣೆಗಳು ಲೇಪಾಕ್ಷಿಯಲ್ಲಿವೆ.
ಹೆಚ್ಚು ಕಡಿಮೆ 500 ವರ್ಷಗಳ ಐತಿಹ್ಯವುಳ್ಳ ಈ ವೀರಭದ್ರ ದೇವಾಲಯದ ಸುತ್ತ ಪೌರಾಣಿಕ, ಚಾರಿತ್ರಿಕ ಹಲವು ಗಾಥೆಗಳಿವೆ.
ಲೇಪಾಕ್ಷಿಯಲ್ಲಿ ಒಂದು ವಿಶೇಷ ಸ್ತಂಭವಿದೆ. ಇದು ಸಾಕಷ್ಟು ಜನಪ್ರಿಯ ಕೂಡ. ಕಂಬದ ಕೆಳಗೆ ಪೇಪರ್, ಬಟ್ಟೆಯನ್ನು ಹಾಕಿ ಎಳೆಯಲಾಗುತ್ತದೆ..
ಈ ಕಂಬದ ಬಗ್ಗೆ ಹಲವು ಕತೆಗಳಿವೆ. ಆದರೆ, ಇತಿಹಾಸಕಾರರ ಅಭಿಪ್ರಾಯಕ್ಕೂ, ಜನರು ಆಡುವ ಮಾತುಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ.
ಇತಿಹಾಸಕಾರರ ಪ್ರಕಾರ ಇದು ತೂಗುವ ಸ್ತಂಭವಲ್ಲ.. ಕಾಲ ಕ್ರಮೇಣ ಈ ಸ್ತಂಭದ ಕೆಳಗಿನ ಭೂಮಿ ಕುಸಿದ ಕಾರಣ ಸ್ತಂಭ ಪಾಕ್ಷಿಕವಾಗಿ ಗಾಳಿಯಲ್ಲಿ ಇರುವಂತೆ ಕಾಣುತ್ತದೆ.
ನೀವು ಜಾಗ್ರತೆಯಿಂದ ಗಮನಿಸಿದಲ್ಲಿ ಸ್ತಂಭದ ಒಂದು ಭಾಗ ಭೂಮಿಗೆ ತಾಕಿಕೊಂಡೇ ಇದೆ. ಪೇಪರ್ ಆಗಲಿ.. ಬಟ್ಟೆಯನ್ನಾಗಲಿ ಈ ಸ್ತಂಭದ ಕೆಳಗಿನಿಂದ ಪೂರ್ತಿಯಾಗಿ ಎಳೆಯಲು ಆಗುವುದಿಲ್ಲ.
ಕೆಲವರು ಇದನ್ನು ನೆಲದ ಆಧಾರವಿಲ್ಲದೇ ಗಾಳಿಯಲ್ಲಿ ತೂಗುವ ಸ್ತಂಭ ಎನ್ನುವುದು ಕಟ್ಟುಕತೆ ಎಂದು ಇತಿಹಾಸಕಾರರು ಹೇಳುತ್ತಾರೆ.
ಆದರೆ, ಸ್ಥಳೀಯರು ಮಾತ್ರ ಇದನ್ನು ಒಪ್ಪಲ್ಲ.
ಈ ಸ್ತಂಭ ಒಂದೊಮ್ಮೆ ಪೂರ್ತಿಯಾಗು ತೇಲಾಡುತ್ತಿತ್ತು. ಬ್ರಿಟೀಷರು ಇದನ್ನು ಪರಿಶೀಲಿಸಲು ಕದಲಿಸಿದಾಗ ಸ್ವಲ್ಪಭಾಗ ನೆಲಕ್ಕೆ ತಾಕಿದೆ. ಇಲ್ಲ ಎಂದರೇ, ಅದು ಸಂಪೂರ್ಣವಾಗಿ ಗಾಳಿಯಲ್ಲಿ ತೇಲುತ್ತಿತ್ತು ಎನ್ನುತ್ತಾರೆ.
ADVERTISEMENT
ADVERTISEMENT