ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ಎಟಿಎಂನಲ್ಲಿ ಹಣ ವಿತ್ಡ್ರಾ ಮಾಡಲು ಯತ್ನಿಸಿ ಆಗ ಹಣ ವಿತ್ಡ್ರಾ ವಿಫಲವಾದರೆ ಆಗ ಅಂತಹ ಪ್ರತಿಯೊಂದು ವ್ಯವಹಾರಕ್ಕೂ ದಂಡ ಪಾವತಿಸಬೇಕಾಗುತ್ತದೆ.
ಮೇ 1ರಿಂದ ಅನ್ವಯವಾಗುವಂತೆ ಅಂತಹ ಪ್ರತಿ ವಿಫಲ (failed ATM cash withdrawal transactions) ಹಣದ ವ್ಯವಹಾರಕ್ಕೂ 10 ರೂಪಾಯಿ ದಂಡ ಮತ್ತು ಜಿಎಸ್ಟಿ ಮೊತ್ತವನ್ನು ಪಾವತಿಸಬೇಕಾಗುತ್ತದೆ
ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ತನ್ನ ಗ್ರಾಹಕರಿಗೆ ಸೂಚಿಸಿದೆ.
ಈ ಬಗ್ಗೆ ತನ್ನ ವೆಬ್ಸೈಟ್ನಲ್ಲಿ ಗ್ರಾಹಕರಿಗೆ PNB ಮಾಹಿತಿ ನೀಡಿದೆ. ಜೊತೆಗೆ ಗ್ರಾಹಕರ ಮೊಬೈಲ್ಗೂ ಸಂದೇಶ ರವಾನಿಸಿದೆ.
2019ರಲ್ಲಿ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾವನ್ನು ಪಿಎನ್ಬಿಯಲ್ಲಿ ವಿಲೀನಗೊಳಿಸಲಾಯಿತು.
ADVERTISEMENT
ADVERTISEMENT