ಬಹುನಿರೀಕ್ಷಿತ ಭಾರತೀಯ ಜೀವಾ ವಿಮಾ ನಿಗಮ(ಎಲ್ಐಸಿ)ದ ಐಪಿಒಗೆ ಮಾರಾಟದ ಮೊದಲ ದಿನವೇ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ಬುಧವಾರ ಸಂಜೆ 7 ಗಂಟೆಯ ವೇಳೆಗೆ ಹೂಡಿಕೆದಾರರು ಮಾರಾಟಕ್ಕಿರುವ 16,20,78,067 ಈಕ್ವಿಟಿ ಷೇರುಗಳಲ್ಲಿ 10,86,91,770 ಷೇರುಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅಂದರೆ ಶೇ.67ರಷ್ಟು ಹೂಡಿಕೆ ಮಾಡಿದಂತಾಗಿದೆ.
ಎಲ್ಐಸಿ ಐಪಿಒ ಅನ್ನು ಐದು ವಿಭಾಗಗಳಲ್ಲಿ ಮಾರಾಟಕ್ಕೆ ಇಡಲಾಗಿದೆ. ಇದರಲ್ಲಿ ನೌಕರರು ಮತ್ತು ಪಾಲಿಸಿದಾರರ ಕೋಟಾದಲ್ಲಿನ ಈಕ್ವಿಟಿ ಷೇರು ಸಂಪೂರ್ಣವಾಗಿ ಹೂಡಿಕೆ ಮಾಡಲಾಗಿದೆ. ಚಿಲ್ಲರೆ ಕೋಟಾದಲ್ಲಿ ಶೇಕಡಾ 60 ರಷ್ಟು ಗ್ರಾಹಕರು ಹೂಡಿಕೆ ಮಾಡಿದ್ದರೆ, ಸಾಂಸ್ಥಿಕವಲ್ಲದ ಹೂಡಿಕೆದಾರರ ಕೋಟಾವು ಶೇಕಡಾ 27 ರಷ್ಟು, ಸಾಂಸ್ಥಿಕ ಖರೀದಿದಾರರ ಕೋಟಾದಲ್ಲಿ ಇದುವರೆಗೆ 33 ಪ್ರತಿಶತ ಬಿಡ್ ಕಂಡಿದೆ. ಎಲ್ಐಸಿಯ ಐಪಿಒ ಮಾರಾಟ ದೇಶದ ಅತಿದೊಡ್ಡ ಸಾರ್ವಜನಿಕ ಕೊಡುಗೆಯಾಗಿದೆ.
ಸಾಂಸ್ಥಿಕವಲ್ಲದ ಹೂಡಿಕೆದಾರರು ಶೇಕಡಾ 0.26 ಹೂಡಿಕೆ ಮಾಡಿದ್ದರೆ, ಸಾಂಸ್ಥಿಕ ಖರೀದಿದಾರರು ಶೇ 0.33 ರಷ್ಟು ಹೂಡಿಕೆ ಮಾಡಿದ್ದಾರೆ. ಚಿಲ್ಲರೆ ವೈಯಕ್ತಿಕ ಹೂಡಿಕೆದಾರರ ಕೋಟಾದಲ್ಲಿ ಮೀಸಲಿಟ್ಟ 6.9 ಕೋಟಿ ಷೇರುಗಳಲ್ಲಿ ಸುಮಾರು 50 ಪ್ರತಿಶತದಷ್ಟು ಹೂಡಿಕೆ ಕಂಡಿದೆ ಎಂದು ಹೇಳಲಾಗಿದೆ.
https://youtu.be/VZnbztSXIzY