ಬಾಲಿವುಡ್ ನಟಿ ಕ್ರತಿನಾ ಕೈಫ್(Katrina Kaif) ಹಾಗೂ ಪತಿ ವಿಕ್ಕಿ ಕೌಶಲ್ ಅವರಿಗೆ ಅನಾಮಿಕ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಮುಖಾಂತರ ಜೀವ ಬೆದರಿಕೆ ಹಾಕುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ಮುಂಬೈನ ಸಂತಾಕ್ರುಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇನ್ಸ್ಟಾಗ್ರಾಂ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಕತ್ರಿನಾ ಕೈಫ್ ಅವರನ್ನು ಹಿಂಬಾಲಿಸುತ್ತಿದ್ದಾನೆ. ಅಲ್ಲದೇ, ಕತ್ರಿನಾ ಕೈಫ್ ಹಾಗೂ ಅವರ ಪತಿ ವಿಕ್ಕಿ ಕೌಶಲ್ ಅವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ.
ಮುಂಬೈ ಪೊಲೀಸರು ಆರೋಪಿ ವಿರುದ್ಧ ಐಟಿ ಆ್ಯಕ್ಟ್ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಪ್ 2021 ರ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.