ಅನೇಕ ಜನರು ವಾಸ್ತು ಶಾಸ್ತ್ರಕ್ಕೆ ಹೆಚ್ಚು ಗಮನ ನೀಡುತ್ತಾರೆ. ವಾಸ್ತು ತಜ್ಞರನ್ನು ಸಂಪರ್ಕಿಸದೆ ಯಾರೂ ಯಾವುದೇ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವುದಿಲ್ಲ. ಆದರೆ ಹೆಚ್ಚಿನವರು ಮನೆ, ಕಛೇರಿಗಳ ನಿರ್ಮಾಣದ ಸಮಯದಲ್ಲಿ ಮಾತ್ರ ವಾಸ್ತು ಸಲಹೆಗಳನ್ನು ಪಾಲಿಸಿ ನಂತರದ ವಿಚಾರದಲ್ಲಿ ಅದನ್ನು ಕಡೆಗಣಿಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ಇರಿಸದಿದ್ದರೆ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಜೀವನದಲ್ಲಿ ಸಂತೋಷವು ಕಣ್ಮರೆಯಾಗುತ್ತದೆ. ಅಂದರೆ ಕುಟುಂಬ ಕ್ರಮೇಣ ಬಡತನದತ್ತ ಸಾಗುತ್ತದೆ. ಅಂತಹ ವಾಸ್ತು ಶಾಸ್ತ್ರದಲ್ಲಿ ನಾವು ಧರಿಸುವ ಚಪ್ಪಲಿಗಳ ಬಗ್ಗೆಯೂ ನಿಯಮಗಳಿವೆ.
ನಾವೆಲ್ಲರೂ ನಮ್ಮ ಮನೆಯನ್ನು ಅಚ್ಚುಕಟ್ಟಾಗಿ ಇಡಲು ಬಯಸುತ್ತೇವೆ. ಆದರೆ ಕೆಲವರು ಕೆಲವು ವಿಚಾರಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ನಮ್ಮಲ್ಲಿ ಕೆಲವರಿಗೆ ಚಪ್ಪಲಿ ಮತ್ತು ಬೂಟುಗಳನ್ನು ಅಜಾಗರೂಕತೆಯಿಂದ ಇಡುವ ಅಭ್ಯಾಸವಿದೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಇಡಬೇಕಾದ ಸ್ಥಳಗಳಿವೆ. ಮನೆಯಲ್ಲಿ ತಪ್ಪಾದ ಸ್ಥಳದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದು ಬಡತನವನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಎಲ್ಲಿ ಹಾಕಬೇಕು ಗೊತ್ತಾ? ಬೂಟುಗಳನ್ನು ಎಲ್ಲಿ ಸಂಗ್ರಹಿಸಬೇಕು ಎಂಬುದರ ಕುರಿತು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ.
ಮನೆಯ ಮುಖ್ಯ ಬಾಗಿಲಿನ ಬಳಿ ಎಂದಿಗೂ ಚಪ್ಪಲಿ ಮತ್ತು ಪಾದರಕ್ಷೆಗಳನ್ನು ಇಡಬೇಡಿ:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಳಿ ಪಾದರಕ್ಷೆಗಳನ್ನು ಇಡಬಾರದು. ಮನೆಯ ಮುಖ್ಯ ಬಾಗಿಲು ಧನಾತ್ಮಕ ಶಕ್ತಿಯ ಹೆಬ್ಬಾಗಿಲು. ಅದಕ್ಕಾಗಿಯೇ ಮನೆಯ ಮುಖ್ಯ ಬಾಗಿಲು ಯಾವಾಗಲೂ ಸುಂದರ ಮತ್ತು ಬಲವಾಗಿರುವಂತೆ ನೋಡಿಕೊಳ್ಳಲು ಹೆಚ್ಚಿನ ಗಮನ ನೀಡಬೇಕು. ನೀವು ಮನೆ ಮುಂದೆಯೇ ಪಾದರಕ್ಷೆಗಳನ್ನು ಇಟ್ಟರೆ ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ತಡೆದಂತಾಗುತ್ತದೆ. ಕ್ರಮೇಣ ಬಡತನ ನಮ್ಮನ್ನು ಆವರಿಸುತ್ತದೆ. ಹಾಗಾಗಿ ಮನೆಯ ಮುಖ್ಯ ಬಾಗಿಲಿನ ಬಳಿ ತಪ್ಪಾಗಿಯೂ ಚಪ್ಪಲಿ ಇಡದಂತೆ ಎಚ್ಚರವಹಿಸಿ.
ಮಲಗುವ ಕೋಣೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಎಂದಿಗೂ ಇಡಬೇಡಿ:
ಹೌದು ಇದು ಅಶುಭ. ಮಲಗುವ ಕೋಣೆಯಲ್ಲಿ ಆಕಸ್ಮಿಕವಾಗಿ ಶೂ ರ್ಯಾಕ್ ಅನ್ನು ಹಾಕಬೇಡಿ. ಕೊಠಡಿಯಲ್ಲಿ ಚಪ್ಪಲಿ ಹಾಗೂ ಸ್ಟಾಂಡ್ ಇದ್ದರೆ ಪತಿ-ಪತ್ನಿಯರ ನಡುವಿನ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಅಪಶ್ರುತಿ ಉಂಟಾಗುತ್ತದೆ ಎಂದು ನಂಬಲಾಗಿದೆ. ಕೆಲವೊಮ್ಮೆ ಪತಿ-ಪತ್ನಿಯರ ನಡುವಿನ ಸಂಬಂಧವು ಬೇರ್ಪಡುವ ಹಂತವನ್ನು ತಲುಪುತ್ತದೆ. ಇದರಿಂದ ಕುಟುಂಬಗಳು ಛಿದ್ರವಾಗುತ್ತಿವೆ. ಆದ್ದರಿಂದ ಯಾವುದೇ ಸಂದರ್ಭದಲ್ಲಿ ಮಲಗುವ ಕೋಣೆಯಲ್ಲಿ ಶೂ ರ್ಯಾಕ್ ಅನ್ನು ಇಡಬಾರದು.
ಈ ದಿಕ್ಕಿನಲ್ಲಿ ಪಾದರಕ್ಷೆ ಇಡುವುದು ಅಶುಭ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವ ದಿಕ್ಕಿಗೆ ಚಪ್ಪಲಿ ಮತ್ತು ಪಾದರಕ್ಷೆಗಳನ್ನು ಇಡಬೇಕೆಂದು ತಿಳಿಯಬೇಕು. ವಿಶೇಷವಾಗಿ ಈಶಾನ್ಯ ದಿಕ್ಕಿನಲ್ಲಿ ತಪ್ಪಾಗಿಯೂ ಚಪ್ಪಲಿ ಮತ್ತು ಬೂಟುಗಳನ್ನು ಇಡಬಾರದು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಹಾಳಾಗಿ ಸಾಲದ ಸುಳಿಯಲ್ಲಿ ಸಿಲುಕಬಹುದು.
ಶೂ ಸ್ಟ್ಯಾಂಡ್ ಇಲ್ಲಿಟ್ಟರೆ ಸಮಸ್ಯೆಯಿಲ್ಲ:
-ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಇಡಲು ಅತ್ಯುತ್ತಮವಾದ ಸ್ಥಳವೆಂದರೆ ಪಶ್ಚಿಮ ಹಾಗೂ ನೈರುತ್ಯ ದಿಕ್ಕು.
-ನೀವು ಶೂ ಸ್ಟ್ಯಾಂಡ್ನ್ನು ಮನೆಯ ಮುಖ್ಯದ್ವಾರದ ಹೊರಭಾಗದಲ್ಲಿಡಬಹುದು.
-ನಿಮ್ಮ ಮನೆಯ ಲಿವಿಂಗ್ ರೂಮ್ನ ನೈರುತ್ಯ ಮೂಲೆ ಶೂ ಸ್ಟ್ಯಾಂಡ್ ಇಡಲು ಪ್ರಸಕ್ತವಾದ ಸ್ಥಳ.
-ಶೂ ಸ್ಟ್ಯಾಂಡ್ ಅನ್ನು ಸ್ವಚ್ಛವಾಗಿ ಹಾಗೂ ನೀಟಾಗಿಡುವುದು ಮುಖ್ಯ.ಸ್ವಚ್ಛವಿಲ್ಲದ, ಅಸ್ತವ್ಯಸ್ತಗೊಂಡಿರುವ ಶೂ ಸ್ಟ್ಯಾಂಡ್ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
-ಚಪ್ಪಲಿ ಸ್ಟ್ಯಾಂಡ್ ಬಾಗಿಲು ಸದಾ ಮುಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚದಂತೆ ತಡೆಯಬಹುದು.