ಬೆಂಗಳೂರು (Bangalore) ನಗರದ ಮಹದೇವಪುರ (Mahadevpura) ವಯಲದಲ್ಲಿ ರಾಜಕಾಲುವೆ (Rajakaluve)ಯನ್ನು ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಕಳೆದ ತಿಂಗಳು ಅಂದರೆ ಆಗಸ್ಟ್ 17ರಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತರಿಗೆ ವರದಿ ಸಲ್ಲಿಕೆ ಆಗಿತ್ತು.
ಮಹದೇವಪುರ ವಲಯ ಆಯುಕ್ತರು ನೀಡಿದ್ದ ಆದೇಶದ ಮೇರೆಗೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ 11 ಟೆಕ್ಪಾರ್ಕ್ಗಳು ಮತ್ತು ಡೆವಲಪರ್ಸ್ ಬಗ್ಗೆ ವರದಿ ಸಲ್ಲಿಕೆ ಆಗಿತ್ತು.
ಈ ಭಾಗದಲ್ಲಿ ಮಳೆ ನೀರು ನಿಂತು ಅಧ್ವಾನ ಆದ ಬಳಿಕ ನಿನ್ನೆಯಿಂದ ಬಿಬಿಎಂಪಿ ತೆರವು ಕಾರ್ಯಾಚರಣೆ ಆರಂಭಿಸಿತ್ತು.
1. ಬೆಂಗಳೂರು ಟೆಕ್ ಪಾರ್ಕ್, ಪೂರ್ವ ಪ್ಯಾರೈಡಸ್ – ಮಹದೇವಪುರ
2. ಆರ್ಬಿಡಿ – ಹಾಲನಾಯಕನಹಳ್ಳಿ, ಜ್ಞಾನಸಂದ್ರ, ದೊಡ್ಡಕನ್ನಹಳ್ಳಿ
3. ವಿಪ್ರೋ – ದೊಡ್ಡಕನ್ನಹಳ್ಳಿ
4. ಎಕೋ ಸ್ಪೇಸ್ – ಬೆಳ್ಳಂದೂರು
5. ಗೋಪಾಲನ್ – ಬೆಳ್ಳಂದೂರು
6. ಗೋಪಾಲನ್ – ಹೂಡಿ
7. ದಿವ್ಯಾ ಸ್ಕೂಲ್ ಮತ್ತು ಇತರರು – ಹೂಡಿ
8. ಗೋಪಾಲನ್ ಮತ್ತು ಇತರರು – ಹೂಡಿ, ಸೊನ್ನೆಹಳ್ಳಿ
9. ಆದರ್ಶ – ಆರ್ ನಾರಾಯಣಪುರ
10. ಕೊಲಂಬಿಯಾ ಏಷ್ಯಾ ಆಸ್ಪತ್ರೆ – ರಾಮಗೊಂಡನಹಳ್ಳಿ
11. ನ್ಯೂ ಹಾರಿಜನ್ ಕಾಲೇಜು – ಕಾಡುಬೀಸನಹಳ್ಳಿ
12. ಆದರ್ಶ ರೀಟ್ರೀಸ್ – ದೇವರಬೀಸನಹಳ್ಳಿ
13. ಎಪಿಸಿಯಾನ್ ಮತ್ತು ದಿವ್ಯಾಶ್ರೀ – ಎಬಿಕೆ ಮತ್ತು ಯಮಲೂರು
14. ಪ್ರೆಸ್ಟೀಜ್, ಆದರ್ಶ, ಸಲಪೂರಿಯಾ – ಮಾರತ್ತಹಳ್ಳಿ ಮತ್ತು ಕರಿಯಮ್ಮನ ಅಗ್ರಹಾರ
15. ನಲಪಾಡ್ – ಚಲ್ಲಘಟ್ಟ
ಮಳೆ ಕಾಲುವೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಈ ವರದಿಯನ್ನು ಸಲ್ಲಿಸಿದ್ದರು.
ADVERTISEMENT
ADVERTISEMENT