ಸಾಲದ ಆ್ಯಪ್ ಕಿರುಕುಳಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆ್ಯಪ್ ನಿರ್ವಾಹಕರು ಯುವಕನ ಸಂಬಂಧಿಕರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಹೈದರಾಬಾದ್ ನ ಉಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸರು ಮತ್ತು ಸ್ಥಳೀಯರ ಪ್ರಕಾರ. ವಾರಂಗಲ್ ಮೂಲದ ಎಸ್ ರಮೇಶ್ (24) ಎಂಬುವರು 8 ತಿಂಗಳಿಂದ ಉಪ್ಪಳದ ವಿಜಯಪುರಿ ಕಾಲನಿಯಲ್ಲಿ ಇಬ್ಬರು ಸ್ನೇಹಿತರೊಂದಿಗೆ ಬಾಡಿಗೆಗೆ ವಾಸವಾಗಿದ್ದಾರೆ. ಗಣಿತ ಟೀಚರ್ ಆಗಿ ಆನ್ಲೈನ್ನಲ್ಲಿ ಮನೆ ಪಾಠ ಕಲಿಸುತ್ತ ಜೀವನ ಸಾಗಿಸುತ್ತಿದ. ತನ್ನ ಅಗತ್ಯಕ್ಕೆ ಆನ್ ಲೈನ್ ಮೈಕ್ರೋ ಆ್ಯಪ್ ಮೂಲಕ 6 ಸಾವಿರ ರೂ.ಸಾಲ ಪಡೆದಿದ್ದಾನೆ. ಆದರೆ, ಸಾಲವನ್ನು ಸಕಾಲದಲ್ಲಿ ಮರುಪಾವತಿಸಲು ರಮೇಶ್ಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಆ್ಯಪ್ನ ನಿರ್ವಾಹಕರು ಸಾಲ ತೆಗೆದುಕೊಂಡಿರುವ ಬಗ್ಗೆ ಯುವಕನ ಸಂಬಂಧಿಕರ ಫೋನ್ಗಳಿಗೆ ಸಂದೇಶ ಕಳುಹಿಸಿದ್ದಾರೆ.
ವಿಷಯ ತಿಳಿದ ಯುವಕ ಶುಕ್ರವಾರ ರಾತ್ರಿ ಕೋಣೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್ ಗೆ ಟವೆಲ್ ಸುತ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಡವಾಗಿ ಮನೆಗೆ ಬಂದ ಸ್ನೇಹಿತರು ಮನೆಗೆ ಬೀಗ ಹಾಕಿರುವುದನ್ನ ಕಂಡು ಕಾದು ಕುಳಿತಿದ್ದಾರೆ. ಎಷ್ಟು ಹೊತ್ತಾದರೂ ಬಾರದಿದ್ದರಿಂದ ಕಿಟಕಿಯಿಂದ ಗಮನಿಸಿದಾಗ ರಮೇಶ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ನಂತರ ಸಂಬಂಧಿಕರಿಂದ ಮಾಹಿತಿ ಸಂಗ್ರಹಿಸಿದ ಪೊಲೀಸರು, ಆನ್ಲೈನ್ ಸಾಲವನ್ನು ಹೊರತುಪಡಿಸಿ ಯುವಕನಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.