ಪ್ರಧಾನಿ ನರೇಂದ್ರಮೋದಿಯವರು ಜೂನ್ 5 ರಂದು ‘ಜನ್ ಸಮರ್ಥ್’ ವೆಬ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಪೋರ್ಟಲ್ ಮೂಲಕ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ತಂದಿದ್ದಾರೆ.
ಈ ಮೊದಲು ಸರ್ಕಾರಿ ಯೋಜನೆಯಡಿಯಲ್ಲಿ ಸಾಲದ ಸೌಲಭ್ಯ ಪಡೆಯಲು ಬ್ಯಾಂಕ್, ಸರ್ಕಾರಿ ಕಚೇರಿ ಸೇರಿದಂತೆ ಹಲವಡೆ ಅಲೆದಾಡಬೇಕಿತ್ತು. ಈ ಅಲೆದಾಟಕ್ಕೆ ವಿರಾಮ ನೀಡಲು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದ್ದು, ಈ ಕಾರಣಕ್ಕಾಗಿ ‘ಜನ್ ಸಮರ್ಥ್’ ಅಂತರ್ಜಾಲ ತಾಣವನ್ನು ಆರಂಭಿಸಲಾಗಿದೆ.
ಈ ತಾಣದಲ್ಲಿ ನೊಂದಾಯಿಸುವ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ, ಸ್ವಯಂ ಉದ್ಯೋಗಕ್ಕಾಗಿ ಕೃಷಿ ಸಾಲ ಹಾಗೂ ವ್ಯಾಪಾರ ಸಾಲ ಪಡೆಯಲು ಅರ್ಜಿ ಸಲ್ಲಿಸಬಹುದು. ಈ ಮೊದಲು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಮುದ್ರಾ ಯೋಜನೆ, ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಮಾಹಿತಿ ಕೊರತೆ ಹಾಗೂ ಬ್ಯಾಂಕ್ ಗಳ ಅಸಹಕಾರದಿಂದ ಜನ ಈ ಯೋಜನೆಗಳ ಬಗ್ಗೆ ಜನ ಹೆಚ್ಚಿನ ಆಸಕ್ತಿ ವಹಿಸಿರಲಿಲ್ಲ. ಇದೀಗ, ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಿ, ಆನ್ಲೈನ್ ಮೂಲಕವೇ ಒಪ್ಪಿಗೆ ಪಡೆಯುವ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಏನಿದು ಜನ ಸಮರ್ಥ್.!
ಜನ ಸಮರ್ಥ್ ಎಂಬ ಜಾಲತಾಣ ನಾಗರೀಕರಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವ ತಾಣ. ಇಲ್ಲಿಯವರೆಗೆ ಕೃಷಿ, ಶಿಕ್ಷಣ ಮತ್ತಿತರೆ ಸಾಲಗಳಿಗಾಗಿ ಜನರು ಬ್ಯಾಂಕ್, ಸರ್ಕಾರಿ ಕಚೇರಿ ಮತ್ತಿತರ ಮೂಲಗಳಲ್ಲಿ ತಿರುಗಾಡಬೇಕಾಗಿತ್ತು. ಆದರೆ, ಈ ಪೋರ್ಟಲ್ ಮೂಲಕ ಜನರು ಕುಳಿತಲ್ಲಿಯೇ ಅಂತರ್ಜಾಲದ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಸಾಲದ ಯೋಜನೆಗಳು :
ಈ ಪೋರ್ಟಲ್ನಲ್ಲಿ ಒಟ್ಟಾರೆಯಾಗಿ 13 ಯೋಜನೆಗಳಲ್ಲಿ ಸಾಲದ ಸೌಲಭ್ಯ ಪಡೆಯಬುದು. ಈ 13 ಯೋಜನೆಗಳನ್ನು 4 ವಿಭಾಗಗಳಲ್ಲಿ ವಿಭಾಗಿಸಲಾಗಿದೆ.
1) ಶೈಕ್ಷಣಿಕ ಸಾಲಗಳು
2) ಕೃಷಿ ಸಾಲಗಳು
3) ವ್ಯಾಪಾರಕ್ಕಾಗಿ ಸಾಲಗಳು
4) ಜೀವನಾಧಾರ ಸಾಲಗಳು
ಈ ಮೇಲನ 4 ವಲಯಗಳ ಮೂಲಕ 13 ಸಾಲ ಸೌಲಭ್ಯದ ಯೋಜನೆಗಳು ಈ ಪೋರ್ಟಲ್ ನಲ್ಲಿವೆ.
ಯಾರು ಮತ್ತು ಹೇಗೆ ಅರ್ಜಿ ಸಲ್ಲಿಸಬಹುದು..?
ಭಅರತೀಯ ನಾಗರೀಕರಾದ ಪ್ರತಿಯೊಬ್ಬರೂ ಈ ತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಪೋರ್ಟಲ್ನಲ್ಲಿ 13 ಯೋಜನೆಗಳಿವೆ. ಮೊದಲು ನೀವು ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅರ್ಹತೆಯನ್ನು ಪರೀಕ್ಷಿಸಿಕೊಳ್ಳಬೇಕು. ಆಗ, ನೀವು ಯಾವ ಯೋಜನೆ ಅಡಿಯಲ್ಲಿ ಅರ್ಹರಿದ್ದೀರಿ ಎಂದು ಪೋರ್ಟಲ್ ತಿಳಿಸುತ್ತದೆ. ಆ್ ಅರ್ಜಿ ಸಲ್ಲಿಸಿ ಡಿಜಿಟಲ್ ಒಪ್ಪಿಗೆಗಾಗ ಕಾಯಬೇಕು.
ಯಾವ ದಾಖಲೆಗಳನ್ನು ಸಲ್ಲಿಸಬೇಕು..?
ಸಾಲ ಪಡೆಯಲು ಬೇರೆ ಬೇರೆ ರೀತಿಯ ಯೋಜನೆಗಳಿರುವುದರಿಂದ ಎಲ್ಲದಕ್ಕೂ ಬೇರೆ ಬೇರೆ ರೀತಿಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ, ಎಲ್ಲಾ ಯೋಜನೆಗಳಿಗೂ ಸಾಮಾನ್ಯವಾಗಿ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ ಪ್ರತಿಗಳು ಅವಶ್ಯವಾಗಿ ಬೇಕಾಗುತ್ತವೆ.
ಮೊದಲು ನಾಗರೀಕರು ಈ ತಾಣದಲ್ಲಿ ನೊಂದಾಯಿಸಿಕೊಂಡು ಸಾಲ ಪಡೆಯಲು ಅರ್ಹತೆಯನ್ನು ಪರೀಕ್ಷಿಸಿಕೊಳ್ಳಬೇಕು. ಅನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಆನ್ಲೈನ್ ಮೂಲಕ ಸಾಲ ನೀಡುವ 125 ಬ್ಯಾಂಕ್ಗಳಿಗೆ ಈ ಅರ್ಜಿ ವರ್ಗಾವಣೆಯಾಗುತ್ತದೆ. ಇಲ್ಲಿ ಅರ್ಜಿ ಅಪ್ರೂವಲ್ ಆದರೆ, ಸಾಲ ದೊರೆತ ಹಾಗೆ. ಈ ಪೂರ್ಣ ಪ್ರಕ್ರಿಯೆಯನ್ನು ನೀವು ನಿಮ್ಮ ಜನ್ ಸಮರ್ಥ್ ಖಾತೆಯಿಂದ ಪರಿಶೀಲಿಸಬಹುದಾಗಿರುತ್ತದೆ.
ಹೆಚ್ಚನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಕೆಗಾಗಿ ಜನ್ ಸಮರ್ಥ್ ಜಾಲತಾಣಕ್ಕೆ ಭೇಟಿ ನೀಡಬಹುದು. https://www.jansamarth.in/home