ಮಾರ್ಚ್ 15 ಅಥವಾ 16ರಂದು ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ.
ಗುರುವಾರ ಅಥವಾ ಶುಕ್ರವಾರ ಭಾರತೀಯ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿವೆ.
ಜಮ್ಮು-ಕಾಶ್ಮೀರ ಮತ್ತು ಲಡಾಕ್ಗೆ ಚುನಾವಣಾ ಆಯೋಗ ಸೋಮವಾರ ಭೇಟಿ ನೀಡಲಿದ್ದು, ಬುಧವಾರದವರೆಗೆ ಪ್ರವಾಸದಲ್ಲಿರಲಿದೆ. ಈ ಎರಡೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವಾಗ ಲೋಕಸಭಾ ಚುನಾವಣೆ ನಡೆಸಬಹುದು ಎಂಬ ಬಗ್ಗೆ ಆಯೋಗ ತೀರ್ಮಾನಿಸಲಿದೆ.
ಜಮ್ಮು-ಕಾಶ್ಮೀರ ಭೇಟಿ ಮುಗಿದ ಬಳಿಕ ಆಯೋಗ ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಪ್ರಕಟಿಸಬಹುದು.
ಈಗಾಗಲೇ ಬಿಜೆಪಿ 195 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಕಾಂಗ್ರೆಸ್ 39 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.