ಈ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 370ರ ಗಡಿ ದಾಟಲಿದೆ ಮತ್ತು ಎನ್ಡಿಎ 400ರ ಗಡಿ ದಾಟಲಿದೆ ಎಂಬ ಘೋಷಣೆಯನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮೊಳಗಿಸಿವೆ.
ಈಗಾಗಲೇ ಎರಡು ಹಂತದ ಲೋಕಸಭಾ ಚುನಾವಣೆ ಮುಗಿದಿದೆ. ಈ ನಡುವೆ ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದಾಡ್ತಿರುವ ಸಮೀಕ್ಷೆ ಬಿಜೆಪಿಗೆ ಹೀನಾಯ ಸೋಲಿನ ಸುಳಿವನ್ನು ನೀಡಿದೆ
ಈ ಸಮೀಕ್ಷೆಯ ಪ್ರಕಾರ ಬಿಜೆಪಿ ಸ್ವತಂತ್ರವಾಗಿ ಅಥವಾ ಎನ್ಡಿಎ ಮೈತ್ರಿಕೂಟವಾಗಲೀ ಈ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ.
ಆ ಸಮೀಕ್ಷೆಯನ್ನು ಮೋದಿ ಸರ್ಕಾರದ ಅವಧಿಯಲ್ಲಿ ಕೇಂದ್ರ ತನಿಖಾ ದಳ ಸಿಬಿಐ ಮುಖ್ಯಸ್ಥರಾಗಿದ್ದ ಎಂ ನಾಗೇಶ್ವರ್ ರಾವ್ ಮತ್ತು ಉತ್ತರಪ್ರದೇಶ ಹಿಂದೂ ಮಹಾಸಭಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ದೇಶದಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಗುಪ್ತಚರ ಅಧಿಕಾರಿಗಳೇ ಸೇರಿಕೊಂಡು ಮಾಡಲಾದ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ ಎಂಬ ಸುಳಿವು ನೀಡಿದ್ದಾರೆ ಎಂದು ಆ ಪೋಸ್ಟ್ಗಳಲ್ಲಿ ಹೇಳಲಾಗಿದೆ.
ಹಾಗಾದ್ರೆ ಈ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಯಾವ ರಾಜ್ಯದಲ್ಲಿ ಎಷ್ಟು ಸೀಟು ಸಿಗಬಹುದು..?
ಆಂಧ್ರಪ್ರದೇಶ – 01
ಅರುಣಾಚಲಪ್ರದೇಶ – 01
ಅಸ್ಸಾಂ – 06
ಬಿಹಾರ – 10
ಚಂಡೀಗಢ – 01
ದಾದ್ರಾ ನಗರ್ ಹವೇಲಿ-ದಿಯು ದಮನ್ – 01
ದೆಹಲಿ -03
ಗೋವಾ -01
ಗುಜರಾತ್ – 20
ಹರಿಯಾಣ – 06
ಜಮ್ಮು-ಕಾಶ್ಮೀರ -02
ಜಾರ್ಖಂಡ್ – 06
ಕರ್ನಾಟಕ – 12
ಹಿಮಾಚಲಪ್ರದೇಶ – 02
ಕೇರಳ -00
ಲಡಾಕ್ -01
ಲಕ್ಷದ್ವೀಪ -00
ಮಧ್ಯಪ್ರದೇಶ – 26
ಮಹಾರಾಷ್ಟ್ರ – 18
ಮಣಿಪುರ -01
ಮೇಘಾಲಯ -00
ಮಿಜೋರಾಂ -00
ನಾಗಲ್ಯಾಂಡ್ –00
ಒಡಿಶಾ -09
ಪುದುಚೇರಿ -00
ಪಂಜಾಬ್ -02
ರಾಜಸ್ಥಾನ – 20
ಸಿಕ್ಕಿಂ -00
ತಮಿಳುನಾಡು – 00
ತೆಲಂಗಾಣ -05
ತ್ರಿಪುರ -01
ಉತ್ತರಾಖಂಡ್ -03
ಉತ್ತರಪ್ರದೇಶ -50
ಪಶ್ಚಿಮ ಬಂಗಾಳ -20
ಅಂದರೆ ಬಿಜೆಪಿ ಈ ಸಮೀಕ್ಷೆಯ ಪ್ರಕಾರ 227 ಲೋಕಸಭಾ ಕ್ಷೇತ್ರಗಳನ್ನಷ್ಟೇ ಗೆಲ್ಲಲಿದೆ. ಅಂದರೆ ಬಹುಮತಕ್ಕೆ ಬಿಜೆಪಿಗೆ 45 ಸಂಸದರ ಕೊರತೆ ಉಂಟಾಗಲಿದೆ.
ADVERTISEMENT
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಮೀಕ್ಷೆಯ ಪ್ರಕಾರ ಬಿಜೆಪಿಗೆ 76 ಸೀಟುಗಳು ನಷ್ಟ ಆಗಲಿದೆ. ಸದ್ಯದ ಸನ್ನಿವೇಶದಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹೊರತುಪಡಿಸಿ ಬಹುಮತ ಭರ್ತಿ ಮಾಡಬಲ್ಲ ಮಿತ್ರಪಕ್ಷಗಳಿಲ್ಲ.
ADVERTISEMENT