18 ಲೋಕಸಭಾ ಚುನಾವಣಾ ಫಲಿತಾಂಶ ಸಂಬಂಧ ಭಾರತೀಯ ಚುನಾವಣಾ ಆಯೋಗ ಜೂನ್ 6ರಂದು ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
18ನೇ ಲೋಕಸಭಾ ಚುನಾವಣೆಯಲ್ಲಿ 17 ಪಕ್ಷಗಳು ಕೇವಲ ತಲಾ ಒಬ್ಬರು ಸಂಸದರನ್ನಷ್ಟೇ ಹೊಂದಿವೆ.
ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ – 01. ಈ ಪಕ್ಷ ಅಸ್ಸಾಂನಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ.
ಅಸ್ಸಾಂ ಗಣ ಪರಿಷತ್ – 01. ಒಂದು ಕಾಲದಲ್ಲಿ ಅಸ್ಸಾಂನಲ್ಲಿ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಆಡಳಿತ ನಡೆಸಿದ್ದ ಅಸ್ಸಾಂ ಗಣ ಪರಿಷತ್ ದೀರ್ಘಕಾಲದಿಂದ ಬಿಜೆಪಿ ಮೈತ್ರಿಯಲ್ಲಿದೆ.
ಹಿಂದೂಸ್ತಾನಿ ಅವಾಮಿ ಮೋರ್ಚಾ – 01. ಬಿಹಾರದ ಪಕ್ಷದ ಸ್ಥಾಪಕರೂ ಅಗಿರುವ ಮಾಜಿ ಮುಖ್ಯಮಂತ್ರಿ ಜಿತನ್ ರಾಂ ಮಾಂಝಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಕೇರಳದ ಎರಡು ಪ್ರಾದೇಶಿಕ ಪಕ್ಷಗಳಾದ ಕೇರಳ ಕಾಂಗ್ರೆಸ್ ಮತ್ತು ರೆವಲ್ಯೂಷನರಿ ಸೋಷಿಯಲಿಸ್ಟ್ ಪಕ್ಷ ತಲಾ ಒಬ್ಬ ಸಂಸದರನ್ನು ಹೊಂದಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಕೇವಲ 1 ಸಂಸದರನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಬಣ ಭಾರೀ ಆಘಾತ ಅನುಭವಿಸಿದೆ.
ಪಂಜಾಬ್ನಲ್ಲಿ ದೀರ್ಘಕಾಲ ಹಿಡಿತ ಹೊಂದಿದ್ದ ಮತ್ತು ವಾಜಪೇಯಿ ಅವಧಿಯಲ್ಲಿ ಎನ್ಡಿಎಯ ಪ್ರಮುಖ ಪಾಲುದಾರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳ ಈಗ ಕೇವಲ ಒಬ್ಬ ಸಂಸದರನ್ನು ಹೊಂದಿದೆ.
ಈಶಾನ್ಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳಾದ ವಾಯ್ಸ್ ಆಫ್ ದಿ ಪೀಪಲ್ ಪಾರ್ಟಿ, ಝೋರಾಮ್ ಪೀಪಲ್ಸ್ ಮೂವ್ಮೆಂಟ್, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ತಲಾ ಒಬ್ಬ ಸಂಸದರನ್ನು ಹೊಂದಿದೆ.
ರಾಜಸ್ಥಾನದಲ್ಲಿ ರಾಷ್ಟ್ರೀಯ ಲೋಕತಾಂತ್ರಿ ಪಕ್ಷ ಮತ್ತು ಭಾರತೀಯ ಆದಿವಾಸಿ ಪಕ್ಷ ತಲಾ ಒಬ್ಬ ಸಂಸದರನ್ನು ಹೊಂದಿದೆ.
ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಂಡಿಎಂಕೆ 1, ಎನ್ಡಿಎ ಭಾಗವಾಗಿರುವ ಉತ್ತರಪ್ರದೇಶ ಮೂಲದ ಅಪ್ನಾದಳ್ 1, ಜಾರ್ಖಂಡ್ ಮೂಲದ ಎಜೆಎಸ್ಯು ಪಕ್ಷ 1 ಸಂಸದರನ್ನಷ್ಟೇ ಹೊಂದಿದೆ.
ಉತ್ತರಪ್ರದೇಶದಲ್ಲಿ ಹೊಸದಾಗಿ ಉದಯವಾಗಿರುವ ದಲಿತ ನಾಯಕ ಚಂದ್ರಶೇಖರ್ ಆಜಾದ್ ಅವರ ಪಕ್ಷ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಎಐಎಂಐಎಂನಲ್ಲಿ ಅಸಾದುದ್ದೀನ್ ಓವೈಸಿ ಏಕೈಕ ಸಂಸದರಾಗಿದ್ದಾರೆ.
ADVERTISEMENT
ADVERTISEMENT