ತೈಲ ಬೆಲೆ ಬದಲಾವಣೆ ಮಾಡದ ಕಾರಣ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳು 18 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿವೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಳಿಕ ಅಂದರೆ ಮಾರ್ಚ್ 25ರ ಬಳಿಕ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಹಾಗೂ ಡಾಲರ್-ರೂಪಾಯಿ ಮೌಲ್ಯ ಆಧರಿಸಿ ಪ್ರತಿ ದಿನ ದರ ಪರಿಷ್ಕರಣೆ ಮಾಡಲಾಗ್ತಿತ್ತು. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಇಳಿಸಿದ ಬಳಿಕ ದರ ಪರಿಷ್ಕರಣೆ ಆಗುತ್ತಿಲ್ಲ.
ಮೊದಲ ತ್ರೈಮಾಸಿಕ ವರ್ಷ ಅಂದರೆ ಏಪ್ರಿಲ್ 1ರಿಂದ ಜುಲೈ 31ರವರೆಗೆ ಐಒಸಿಎಲ್ 1,995 ಕೋಟಿ ರೂ., ಬಿಪಿಸಿಎಲ್ 6,290 ಕೋಟಿ ರೂ., ಮತ್ತು ಹೆಚ್ಪಿಸಿಎಲ್ 10,196 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ ಎಂದು ಷೇರು ಮಾರುಕಟ್ಟೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದೆ.
ADVERTISEMENT
ADVERTISEMENT