ಪ್ರೀತಿಸಿ ಮದುವೆಯಾಗಬೇಕಿದ್ದ ಹುಡುಗಿ ಮತ್ತವಳ ತಾಯಿಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ ವೈದ್ಯನೊಬ್ಬನ ಹತ್ಯೆ ಮಾಡಲಾಗಿದೆ.
ವೈದ್ಯ ಯುವತಿಯೊಬ್ಬಳನ್ನು ಪ್ರೀತಿಸಿದ್ದ, ಅವರ ಮನೆಯವರನ್ನು ಮದುವೆಗೆ ಒಪ್ಪಿಸಿದ್ದ. ಆದರೆ, ಈ ವೇಳೆ ಪ್ರಮಾದ ನಡೆದು ಯುವತಿಯನ್ನು ಮದುವೆಯಾಗಬೇಕಿದ್ದ ವೈದ್ಯ ಕೊಲೆಯಾಗಿದ್ದಾನೆ.
ಬೆಂಗಳೂರಿನ ಬೇಗೂರು ಬಳಿಯ ನ್ಯೂ ಮೈಕ್ರೋ ಲೇಔಟ್ನಲ್ಲಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ. ವೈದ್ಯ ಡಾ.ವಿಕಾಸ್ ಹಾಗೂ ಪ್ರತಿಭಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ನವೆಂಬರ್ನಲ್ಲಿ ಇವರ ವಿವಾಹವು ನಿಶ್ಚಿತಗೊಂಡಿತ್ತು. ಆದರೆ, ಡಾ.ವಿಕಾಸ್, ಪ್ರತಿಭಾ ಹಾಗೂ ಅವರ ತಾಯಿಯ ಅಶ್ಲೀಲ ವಿಡಿಯೋವೊಂದನ್ನು ಇನ್ಸ್ಟಾಗ್ರಾಂಗೆ ಹಾಕಿದ್ದಾನೆ. ಇದರಿಂದ ಪ್ರತಿಭಾ ಮನೆಯವರು ವಿಕಾಸ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಇದನ್ನೂ ಓದಿ : ಬಿಜೆಪಿ ನಾಯಕಿ ಸೋನಾಲಿ ಪೊಗಾಟ್ ಕೊಲೆ ಪ್ರಕರಣ : ಸತ್ಯ ಸಂಗತಿಗಳು
ಇದರಿಂದ ಮನನೊಂದಿದ್ದ ಯುವತಿ ಪ್ರತಿಭಾ ತನ್ನ ಸ್ನೇಹಿತರ ಬಳಿ ಈ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಆಕ್ರೋಶಗೊಂಡಿದ್ದ ಗೆಳೆಯರಾದ ಸುಶೀಲ್, ಗೌತಮ್ ಮತ್ತು ಸೂರ್ಯ, ವಿಕಾಸ್ನನ್ನು ಮಾತನಾಡಬೇಕೆಂದು ಕರೆಯಿಸಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.
ಗಾಯಗೊಂಡಿದ್ದ ವಿಕಾಸ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ವಿಕಾಸ್ ಸಾವನ್ನಪ್ಪಿದ್ದಾನೆ. ಈ ಕುರಿಸು ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ, ಸುಶೀಲ್ ಮತ್ತು ಗೌತಮ್ರನ್ನು ಬಂಧಿಸಿದ್ದಾರೆ. ಸೂರ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : ನಟ ದರ್ಶನ್ರಿಂದ ಕೊಲೆ ಬೆದರಿಕೆ : ನಿರ್ಮಾಪಕನಿಂದ ದೂರು ದಾಖಲು
https://www.youtube.com/watch?v=4WGtezrMXAI