ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆಯಾದ ಇವತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಳಗ್ಗೆಯೇ 8 ಗಂಟೆ 41 ನಿಮಿಷಕ್ಕೆ ಟ್ವೀಟ್ ಮೂಲಕ ಗ್ಯಾಸ್ ಬೆಲೆ ಇಳಿಕೆ ಘೋಷಣೆ ಮಾಡಿದ್ದಾರೆ.
ಗ್ಯಾಸ್ ಸಿಲಿಂಡರ್ನ ಬೆಲೆ 100 ರೂಪಾಯಿ ಇಳಿಕೆಯಾಗಲಿದೆ. ಸದ್ಯಕ್ಕೆ ಬೆಂಗಳೂರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 905 ರೂಪಾಯಿ ಇದ್ದು, ದರ ಇಳಿಕೆಯಿಂದ 805 ರೂಪಾಯಿ ಆಗಲಿದೆ.
ಕಳೆದ ವರ್ಷದ ಆಗಸ್ಟ್ನಲ್ಲಿ ಗ್ಯಾಸ್ ಬೆಲೆಯನ್ನು 200 ರೂಪಾಯಿ ಇಳಿಕೆ ಮಾಡಲಾಗಿತ್ತು.
ಮುಂದಿನ ವರ್ಷದ ಮಾರ್ಚ್ 31ರವರೆಗೂ ಉಜ್ವಲ ಎಲ್ಪಿಜಿ ಸಬ್ಸಿಡಿ ವಿಸ್ತರಣೆಗೆ ಗುರುವಾರವಷ್ಟೇ (ನಿನ್ನೆಯಷ್ಟೇ) ಪ್ರಧಾನಿ ಮೋದಿ ಸರ್ಕಾರ ತೀರ್ಮಾನ ಮಾಡಿತ್ತು.
ಉಜ್ವಲ ಯೋಜನೆಯಡಿಯಲ್ಲಿ 10 ಕೋಟಿ 20 ಲಕ್ಷ ಕುಟುಂಬಗಳು ಸರ್ಕಾರದಿಂದ ಸಬ್ಸಿಡಿಯನ್ನು ಪಡೆಯುತ್ತಿವೆ. ಒಂದು ಗ್ಯಾಸ್ಗೆ ಸರ್ಕಾರ 300 ರೂಪಾಯಿ ಸಬ್ಸಿಡಿಯನ್ನು ನೀಡುತಿದೆ.
2016ರಲ್ಲಿ ಪರಿಚಯಿಸಲಾದ ಉಜ್ವಲ ಯೋಜನೆಯಡಿಯಲ್ಲಷ್ಟೇ ಈಗ ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿಯನ್ನು ನೀಡುತ್ತಿದೆ.
ಮೊದಲ ಬಾರಿಗೆ 2022ರ ಮೇನಲ್ಲಿ ಉಜ್ವಲ ಯೋಜನೆಯಡಿಯಲ್ಲಿ ಗ್ಯಾಸ್ಗೆ 200 ರೂಪಾಯಿ ಸಬ್ಸಿಡಿ ನೀಡಲಾಯಿತು. ಆ ಬಳಿಕ ಆ ಮೊತ್ತವನ್ನು ಕಳೆದ ವರ್ಷ ಅಕ್ಟೋಬರ್ 100 ರೂಪಾಯಿ ಹೆಚ್ಚಳ ಮಾಡಲಾಯಿತು. ಅಂದರೆ 300 ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು.
ಉದಾಹರಣೆಗೆ ಬೆಂಗಳೂರಲ್ಲಿ ಮನೆ ಬಳಕೆಯ ಅಡುಗೆ ಅನಿಲದ ಬೆಲೆ 905 ರೂಪಾಯಿ. ಅಂದರೆ ಉಜ್ವಲ ಯೋಜನೆಯಡಿಯಲ್ಲಿ ಸಂಪರ್ಕ ಪಡೆದಿರುವ ಬಿಪಿಎಲ್ ಕುಟುಂದಬವರು ಈ ತಿಂಗಳಿಂದ ಪಾವತಿ ಮಾಡಬೇಕಿರುವ ಮೊತ್ತ ಸಿಲಿಂಡರ್ಗೆ 605 (905-300=505) ರೂಪಾಯಿ.