ಹಣದುಬ್ಬರ ತೀವ್ರವಾಗಿ ಇರುವ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ.
ಗೃಹ ಬಳಕೆಯ LPG ಅಡುಗೆ ಅನಿಲದ ಸಿಲಿಂಡರ್ ದರವನ್ನು ಏಕಾಏಕಿ ಏರಿಕೆ ಮಾಡಿದೆ.
14ಕೆಜಿ ತೂಕದ ಒಂದು ಗ್ಯಾಸ್ ಸಿಲಿಂಡರ್ ಬೆಲೆ 50 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಈಗ ಒಂದು ಸಿಲಿಂಡರ್ ಬೆಲೆ 1000 ರೂಪಾಯಿ ದಾಟಿದೆ.
ಇವತ್ತು ತಿಂಗಳ ಮೊದಲ ದಿನವೂ ಅಲ್ಲ. ತಿಂಗಳ ಪಾಕ್ಷಿಕವೂ ಅಂದರೇ 15ನೇ ತಾರೀಖು ಕೂಡಾ ಅಲ್ಲ. ಆದರೂ ದಿಢೀರ್ ಎಂದು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.